News Karnataka Kannada
Tuesday, May 07 2024
ಆರೋಗ್ಯ

ಉತ್ತಮ ಆರೋಗ್ಯಕ್ಕೆ ಬೆಳ್ಳುಳ್ಳಿಯನ್ನು ಸೇವಿಸಿ

Photo Credit :

ಉತ್ತಮ ಆರೋಗ್ಯಕ್ಕೆ ಬೆಳ್ಳುಳ್ಳಿಯನ್ನು ಸೇವಿಸಿ

ಬೆಳ್ಳುಳ್ಳಿ ವಾಸನೆ ಎಂದು ಮೂಗು ಮುರಿಯುತ್ತಾರೆ ಕೆಲವರು. ಇನ್ನು ಕೆಲವರಿಗಂತೂ ಬೆಳ್ಳುಳ್ಳಿ ಕಂಡರಾಗದು. ಆದರೆ ಬೆಳ್ಳುಳ್ಳಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ಅನೇಕರಿಗೆ ಗೊತ್ತಿಲ್ಲ. ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿ ದೇಹದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

ಆಹಾರ ಪದಾರ್ಥಗಳ ಜೊತೆ ಪ್ರತಿದಿನ ಬೆಳಗ್ಗಿನ ಉಪಹಾರದ ಮುನ್ನ ಬೆಳ್ಳುಳ್ಳಿ ತಿಂದರೆ  ಅದು ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸುತ್ತದೆ.ಬೆಳಗ್ಗೆ ಬೆಳ್ಳುಳ್ಳಿ ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ ಮತ್ತು ಕರುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ. ಶ್ವಾಸಕೋಶ ಕಾಯಿಲೆಗಳಿಂದ ಬಳಲುತ್ತಿರುವವರಿಗೂ ಇದು ರಾಮಬಾಣ. ಅಸ್ತಮಾ ಮತ್ತು ನ್ಯುಮೋನಿಯ ರೋಗಿಗಳಿಗೂ ಬೆಳ್ಳುಳ್ಳಿ ಔಷಧಿಯಾಗಿ ಕೆಲಸ ಮಾಡುತ್ತದೆ.ಕೆಲವೊಬ್ಬರಿಗೆ ಬೆಳ್ಳುಳ್ಳಿ ತಿಂದ ತಕ್ಷಣ ತಲೆನೋವು ಕಾಣಿಸಿಕೊಳ್ಳುತ್ತದೆ. ಅಂಥವರು ಇದನ್ನು ಸೇವಿಸಬೇಡಿ.

ಬೆಳ್ಳುಳ್ಲಿ ಕೇವಲ ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯವರ್ಧಕಕ್ಕೂ ಬಹಳ ಉಪಯೋಗವಿದೆ. ಮುಖದಲ್ಲಿ ಮೊಡವೆಗಳು ಬಿದ್ದರೆ ಅದರಿಂದ ಖಿನ್ನತೆಗೆ ಒಳಗಾಗುವವರು ಹೆಚ್ಚಿನವರು ಇದ್ದಾರೆ. ಮೊಡವೆಯಿಂದ ಸುಂದರವಾದ ಮುಖ  ಹಾಳಾಗುತ್ತದೆ. ಮೊಡವೆಗಳ ಕಲೆ ಮುಖದಲ್ಲಿದ್ದರೆ ಅದಕ್ಕೆ ಬೆಳ್ಳುಳ್ಳಿಯನ್ನು ಜಜ್ಜಿ ಅದರೆ ರಸವನ್ನು ಮುಖಕ್ಕೆ ಹಚ್ಚಿದರೆ ಕಲೆ ಮಾಯವಾಗುತ್ತದೆ. ಬೆಳ್ಳುಳ್ಳಿಯು ಪ್ರತಿಯೊಂದಕ್ಕೆ ಉಪಯುಕ್ತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು