News Karnataka Kannada
Monday, May 13 2024
ಆರೋಗ್ಯ

ಆರೋಗ್ಯವರ್ಧನೆಗೆ ಸಪೋಟ ಹಣ್ಣು ತಿನ್ನಿ

Photo Credit :

ಆರೋಗ್ಯವರ್ಧನೆಗೆ ಸಪೋಟ ಹಣ್ಣು ತಿನ್ನಿ

ಸಪೋಟಹಣ್ಣಿನಲ್ಲಿರುವ ವಿಶಾಲ ಶ್ರೇಣಿಯ ಪೋಷಕಾಂಶಗಳು ಆರೋಗ್ಯಕ್ಕೆ ಬಹಳ ಶ್ರೇಷ್ಠವಾಗಿರುವುದಲ್ಲದೆ ತಿನ್ನಲು ಅತ್ಯಂತ ರುಚಿಯಾಗಿಯೂ ಇರುತ್ತದೆ. ಈ ಹಣ್ಣಿನಲ್ಲಿರುವ ರುಚಿಯಾದ ತಿರುಳು ಸುಲಭವಾಗಿ ಜೀರ್ಣವಾಗುವುದು ಹಾಗೂ ಅದರಲ್ಲಿರುವ ಹೆಚ್ಚಿನ ಗ್ಲೂಕೋಸ್ ನಮ್ಮ ದೇಹಕ್ಕೆ ಪುನರ್ಚೇತನ ಕೊಡುವ ಶಕ್ತಿಯುಳ್ಳದ್ದಾಗಿದೆ. ಆಗಲೇ ಹೇಳಿದಂತೆ ಈ ಹಣ್ಣಿನಲ್ಲಿ ಜೀವಸತ್ವಗಳು (ವಿಟಮಿನ್ಸ್), ಖನಿಜಾಂಶಗಳು ಮತ್ತು ಟ್ಯಾನಿನ್ ಇವುಗಳು ಸಮೃದ್ಧವಾಗಿವೆ. ಅಷ್ಟು ಮಾತ್ರವಲ್ಲದೆ ಇನ್ನು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.

* ವಿಟಮಿನ್ ಎ ಅಂಶವನ್ನು ಹೊಂದಿರುವ ಚಿಕ್ಕುವಿನಿಂದ ಕಣ್ಣಿನ ದೃಷ್ಟಿ ಸುಧಾರಣೆಯಾಗುತ್ತದೆ. ಇದನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ.
* ಸಪೋಟ ಹಣ್ಣಿನಲ್ಲಿ ಆಹಾರಕ್ರಮದ ನಾರಿನಾಂಶ( 5.6/100 gms,) ಇರುವುದರಿಂದ ಮಲಬದ್ಧತೆಗೆ ಸಂಭಂದಪಟ್ಟ ಕೊರತೆಗಳನ್ನು ನೀಗಿಸಲು ಸಹಾಯಮಾಡುತ್ತದೆ. ಹೀಗಾಗಿ ಇದೊಂದು ಮಲಬದ್ಧತೆ ವಿಸರ್ಜನೆ ಮಾಡಿಸುವ ಔಷಧಿಯೆಂದು ಪರಿಗಣಿಸಬಹುದು. ಇದು ದೊಡ್ಡಕರುಳಿನ ಒಳಚರ್ಮವನ್ನು ಕಾಪಾಡುವುದಲ್ಲದೆ ಸೋಂಕುಗಳು ಬರುವುದನ್ನು ತಡೆಯುತ್ತದೆ.
*ಸಪೋಟ ಹಣ್ಣಿನಲ್ಲಿ ಆಹಾರಕ್ರಮದ ನಾರಿನಾಂಶ( 5.6/100 gms,) ಇರುವುದರಿಂದ ಮಲಬದ್ಧತೆಗೆ ಸಂಭಂದಪಟ್ಟ ಕೊರತೆಗಳನ್ನು ನೀಗಿಸಲು ಸಹಾಯಮಾಡುತ್ತದೆ. ಹೀಗಾಗಿ ಇದೊಂದು ಮಲಬದ್ಧತೆ ವಿಸರ್ಜನೆ ಮಾಡಿಸುವ ಔಷಧಿಯೆಂದು ಪರಿಗಣಿಸಬಹುದು. ಇದು ದೊಡ್ಡಕರುಳಿನ ಒಳಚರ್ಮವನ್ನು ಕಾಪಾಡುವುದಲ್ಲದೆ ಸೋಂಕುಗಳು ಕಲ್ಲುಗಳನ್ನು ಹ,ೊರತೆಗೆಯಲು ಸಹಕಾರಿಯಾಗುತ್ತದೆ.
*ಈ ಹಣ್ಣಿನಲ್ಲಿ ಪಾಲಿಫೆನೋಲಿಕ್ ಉತ್ಕರ್ಷಣನಿರೋಧಕ ಇರುವುದರಿಂದ ಅನೇಕ ವಿರೋಧೀ ವೈರುಸ್, ವಿರೋಧೀ ಪರಾವಲಂಬಿ (ಪ್ಯಾರಾಸೈಟ್) ಮತ್ತು ವಿರೋಧೀ ಬ್ಯಾಕ್ಟೀರಿಯ ಗುಣಗಳನ್ನು ಹೊಂದಿದೆ. ಈ ನಿರೋಧಕಗಳು ಬ್ಯಾಕ್ಟೀರಿಯ ಮನುಷ್ಯನದೇಹದೊಳಕ್ಕೆ ಪ್ರವೇಶ ಮಾಡುವುದನ್ನು ತಡೆಯುತ್ತದೆ.
*ಇದರಲ್ಲಿರುವ ಪ್ರಬಲ ನಿದ್ರಾಜನಕ (ಸೆಡೇಟಿವ್) ಉದ್ರೇಕಗೊಂಡಿರುವ ನರಗಳನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆಮಾಡುತ್ತದೆ. ಆದ್ದರಿಂದ ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಇದು ಬಹಳ ಒಳ್ಳೆಯದು.
*ಇದು ಶೀತ ಮತ್ತು ಕೆಮ್ಮು ನಿವಾರಣೆಗೆ ಸಹಾಯಮಾಡುತ್ತದೆ.
*ಇದರ ಬೀಜಗಳನ್ನು ಚೆನ್ನಾಗಿ ಅರೆದು ಪೇಸ್ಟ್‌ಮಾಡಿ ಹರಳೆಣ್ಣೆಯಜೊತೆ ಮಿಶ್ರಣ ಮಾಡಿಕೊಂಡು ನೆತ್ತಿಯಮೇಲೆ ಹಚ್ಚಿ. ಒಂದು ರಾತ್ರಿಕಳೆದು ಮಾರನೇ ದಿನ ಚೆನ್ನಾಗಿ ತೊಳೆಯಿರಿ. ಇದರಿಂದ ನಿಮ್ಮ ಕೂದಲು ಮೃದುವಾಗುವುದಲ್ಲದೆ ತಲೆಹೊಟ್ಟಿನ ಸಮಸ್ಯೆಯನ್ನು ನಿಯಂತ್ರಿಸಬಹುದು.
*ಈ ಹಣ್ಣಿನ ಬೀಜಗಳ ಪುಡಿಯಲ್ಲಿ ಮೂತ್ರವರ್ಧಕ ಗುಣಗಳಿರುವುದರಿಂದ ಮೂತ್ರಪಿಂಡದಲ್ಲಿ ಉಂಟಾಗುವ ಕಲ್ಲುಗಳನ್ನು ಉಚ್ಚಾಡಿಸಲು ಸಹಾಯಮಾಡುತ್ತದೆ. ಹಾಗೆಯೇ ಮೂತ್ರಪಿಂಡ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು