ಬೆಂಗಳೂರು: ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2023ನೇ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್–ಪಿ.ಜಿ) ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಟ್ ಆಫ್ ಅಂಕವನ್ನು ಶೂನ್ಯಕ್ಕೆ ತಗ್ಗಿಸಿದೆ. ಇದರಿಂದಾಗಿ ಪ್ರಸಕ್ತ ವರ್ಷ ನೀಟ್ ಪರೀಕ್ಷೆ ಬರೆದ ಅಭ್ಯರ್ಥಿಗಳೆಲ್ಲರೂ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯಲಿದ್ದಾರೆ.
ನೀಟ್ ಎಲ್ಲಾ ವಿಭಾಗಗಳಿಗೂ ಇದು ಅನ್ವಯಿಸಲಿದೆ. ಕಟಾಫ್ ಹೆಚ್ಚಿಸಿದ್ದ ಕಾರಣ ದೇಶಾದ್ಯಂತ ಮೆಡಿಕಲ್ ಕಾಲೇಜುಗಳಲ್ಲಿ ದಾಖಲಾತಿಯಾಗಿಲ್ಲ. ಹೀಗಾಗಿ ದಾಖಲಾತಿಯಾಗದೇ ಮೆಡಿಕಲ್ ಸೀಟುಗಳು ಖಾಲಿ ಉಳಿದಿವೆ ಕಟಾಫ್ ಅಂಕವನ್ನು ಇಳಿಸಬೇಕೆಂದು ಸ್ಥಾನಿಕ ವೈದ್ಯರ ಸಂಘಟನೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಕಟಾಫ್ ಅಂಕ ಶೂನ್ಯಕ್ಕೆ ಇಳಿಸಿದೆ.
ಇನ್ನೊಂದು ವಿಚಾರವೆಂದರೇ, ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್) ಮೂಲಕ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ (ಪಿ.ಜಿ.) ಪ್ರವೇಶಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಜಾತಿಯನ್ನು ತಪ್ಪಾಗಿ ನಮೂದಿಸಿದ ವಿದ್ಯಾರ್ಥಿನಿಗೆ ಜಾತಿಯ ಪ್ರವರ್ಗದ ಹೆಸರು ಬದಲಾಯಿಸಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.