ಮಂಗಳೂರು: ಗೆಳೆಯರ ಜೊತೆ ಮೈದಾನದಲ್ಲಿ ಆಟವಾಡಿ ಮನೆಗೆ ಹೋಗುತ್ತಿದ್ದ ಯುವಕನಿಗೆ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಗಾಯಗೊಳಿಸಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಳವಾರು ಎಂಬಲ್ಲಿ ಭಾನುವಾರ ಸಂಜೆ ನಡೆದಿತ್ತು.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಕಳವಾರು ನಿವಾಸಿಗಳಾದ ಪ್ರಶಾಂತ್ (28), ಧನರಾಜ್ (23), ಯಜ್ಞೆಶ್ (22) ಎಂಬುವರನ್ನು ಬಂಧಿಸಲಾಗಿದೆ. ಗೆಳೆಯರ ಜೊತೆ ಆಟವಾಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಜ್ಪೆ ಕಳವಾರು ಶಾಂತಿಗುಡ್ಡೆ ನಿವಾಸಿ ಸಫ್ವಾನ್ (23) ಎಂಬುವರಿಗೆ ಇರಿದು ಗಾಯಗೊಳಿಸಲಾಗಿತ್ತು. ಗಾಯಾಳುವನ್ನು ಬಜ್ಪೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ರವಾನಿಸಲಾಗಿತ್ತು.