ಕೋಲ್ಕತ್ತಾ: ಪಾಕಿಸ್ತಾನದ ಗೂಢಚಾರನಾಗಿ ಕೆಲಸ ಮಾಡುತ್ತಿದ್ದ 36 ವರ್ಷದ ವ್ಯಕ್ತಿಯನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ಆತನ ಬಳಿಯಿದ್ದ ಹಲವು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಸುಳಿವಿನ ಆಧಾರದ ಮೇಲೆ ಕೋಲ್ಕತ್ತಾ ಪೊಲೀಸ್ ಸಿಬ್ಬಂದಿ ಶುಕ್ರವಾರ ರಾತ್ರಿ ಹೌರಾದ ಅವರ ನಿವಾಸದಿಂದ ವ್ಯಕ್ತಿಯನ್ನು ಕರೆತಂದರು ಮತ್ತು ಕೋಲ್ಕತ್ತಾದ ವಿಶೇಷ ಕಾರ್ಯಪಡೆಯ ಕಚೇರಿಯಲ್ಲಿ ಸತತ ವಿಚಾರಣೆ ಬಳಿಕ ಈತ ಪಾಕ್ ಗೂಢಚಾರಿ ಎಂಬುವುದು ಬೆಳಕಿಗೆ ಬಂದಿದೆ. ಬಳಿಕ ಆತನ ಬಳಿಯಿದ್ದ ಆನೇಕ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.