ಆಕ್ಲೆಂಡ್: ಖಲಿಸ್ತಾನ್ ಸಿದ್ಧಾಂತದ ವಿರುದ್ಧ ದನಿಯೆತ್ತಿದ್ದ ಆಕ್ಲೆಂಡ್ ಮೂಲದ ಜನಪ್ರಿಯ ರೇಡಿಯೊ ನಿರೂಪಕ ಹರ್ನೆಕ್ ಸಿಂಗ್ ಅವರ ಹತ್ಯೆಗೆ ಯತ್ನಿಸಿದ ಮೂವರು ಖಲಿಸ್ತಾನ್ ಉಗ್ರರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.
ಸರ್ವಜೀತ್ ಸಿಧು, ಸುಖಪ್ರೀತ್ ಸಿಂಗ್, ಮತ್ತೊಬ್ಬ ವ್ಯಕ್ತಿಯನ್ನು ದಾಳಿಯ ಸೂತ್ರಧಾರಿಗಳೆಂದು ಕೋರ್ಟ್ ಹೇಳಿದೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ. ವಿಚಾರಣೆಯ ಸಮಯದಲ್ಲಿ, ನ್ಯಾಯಾಧೀಶ ಮಾರ್ಕ್ ವೂಲ್ಫೋರ್ಡ್ ಧಾರ್ಮಿಕ ಮತಾಂಧತೆಯ ವಿರುದ್ಧ ಪ್ರತಿರೋಧ ತೋರಬೇಕು ಎಂದು ಹೇಳಿದ್ದಾರೆ.
ಡಿಸೆಂಬರ್ 23, 2020 ರಂದು ಹರ್ನೆಕ್ ಸಿಂಗ್ ಅವರು ವಾಹನವೊಂದರಲ್ಲಿದ್ದಾಗ ಧಾರ್ಮಿಕ ಉಗ್ರಗಾಮಿಗಳ ಗುಂಪೊಂದು ಹೊಂಚು ಹಾಕಿದಾಗ ದಾಳಿ ನಡೆಸಿತ್ತು. ಹರ್ನೆಕ್ ಅವರಿಗೆ 40 ಕಡೆ ಇರಿಯಲಾಗಿತ್ತು.