News Karnataka Kannada
Saturday, April 20 2024
Cricket
ಮೈಸೂರು

ಗಾಂಜಾ ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದ ಆರೋಪಿಗೆ ಜೈಲು ಶಿಕ್ಷೆ

77 kg heroin seized in Punjab, four arrested
Photo Credit : By Author

ಮೈಸೂರು: ಗಾಂಜಾ ಮಾರಾಟ ಮಾಡಲು ಯತ್ನಿಸಿ ಜೈಲು ಸೇರಿದ್ದ ಆರೋಪಿಗೆ ಮೈಸೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಹತ್ತು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆನೋತ್ ವೆಂಕಣ್ಣ ಎಂಬಾತನೇ ಜೈಲ್ ಶಿಕ್ಷೆಗೆ ಒಳಗಾದ ಅಪರಾಧಿ. ಈತ  ಆಂಧ್ರ ಪ್ರದೇಶ ದಿಂದ ಅಕ್ರಮವಾಗಿ 20 ಕೆಜಿ ಗಾಂಜಾ ತಂದು ಮೈಸೂರಿನ ಉದಯಗಿರಿ ಠಾಣೆ ವ್ಯಾಪ್ತಿಯ ಶಾಂತಿನಗರ ದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದನು. ಈ ವೇಳೆ (ಜನವರಿ 7, 2021) ಉದಯಗಿರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್  ಎನ್ ಎಂ ಪೂಣಚ್ಚ ರವರು ಗಸ್ತಿನಲ್ಲಿದ್ದಾಗ ಆರೋಪಿ ಬೆನೋತ್ ವೆಂಕಣ್ಣ ತನ್ನ  ಕಪ್ಪು ಸೂಟ್ ಕೇಸ್ ನಲ್ಲಿ ಸುಮಾರು 20 ಕೆಜಿ ಗಾಂಜಾದೊಂದಿಗೆ ನಿಂತಿರುವುದು ಕಂಡು ಬಂದಿತ್ತು.

ಈತನ ಬಗ್ಗೆ ಮೊದಲೇ ಬಾತ್ಮೀದಾರರಿಂದ ಮಾಹಿತಿ ಬಂದ ಹಿನ್ನಲೆಯಲ್ಲಿ ಅನುಮಾನ ಬಂದು ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈತ ಸೂಟ್ ಕೇಸ್ ನಲ್ಲಿ ಗಾಂಜಾವನ್ನಿಟ್ಟುಕೊಂಡು ಹಣಕ್ಕಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು.

ಹೀಗಾಗಿ ಈತನ ಬಳಿಯಿದ್ದ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಆತನ ಬಳಿಯಿದ್ದ ಮಾಲವನ್ನು ವಶಕ್ಕೆ ಪಡೆಯಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಠಾಣೆಯ ಪಿ ಎಸ್ ಐ ಜೈಕೀರ್ತಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಎನ್ ಎಂ ಪೂಣಚ್ಚ ಅವರುಗಳು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷರೋಪಣ ಪತ್ರ ವನ್ನು ಸಲ್ಲಿಸಿದ್ದರು.  ಈ ವೇಳೆ  ತನಿಖಾ ಸಹಾಯಕರಾಗಿ ಸಿಪಿಸಿ ಆರ್ ಎಸ್ ಕೃಷ್ಣ ಕಾರ್ಯ ನಿರ್ವಹಿಸಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ಷ್ಯಾಧಾರಗಳಿಂದ ಆರೋಪ ಸಾಭೀತಾದ ನ್ಯಾಯಾಲಯ ದ SPL C  NO155/21ರಲ್ಲಿ ವಿಚಾರಣೆ ನಡೆಸಿದ ಎನ್ ಡಿ ಪಿ ಎಸ್ ಕೇಸುಗಳ ವಿಶೇಷ ನ್ಯಾಯಾಲಯದ ಪ್ರಧಾನ ಜಿಲ್ಲಾ ಮತ್ತು ಸತ್ರ  ನ್ಯಾಯಾಧೀಶರಾದ ಜಿ ಎಸ್ ಸಂಗ್ರೇಶಿ ರವರು ಆರೋಪಿ ಬೆನೋತ್ ವೆಂಕಣ್ಣ ನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಚಿನ್ನಪ್ಪ ವಾದ ಮಂಡಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು