ಕಲಬುರಗಿ: ಇಲ್ಲಿ ನಡೆದ ಕೆಇಎ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನ ಪೋಲೀಸರು ಬಂಧಿಸಿದ್ದಾರೆ. ಅಫಜಲಪುರ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಆಸೀಫ್ ಸೆರೆಸಿಕ್ಕಿದ್ದಾನೆ.
ಅಭ್ಯರ್ಥಿಗೆ ಬ್ಲೂಟೂತ್ ನೆರವು ನೀಡಿದ್ದ ಎನ್ನಲಾಗಿದೆ. ಅಫಜಲಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳನ್ನ ಬಂಧಿಸಿದಂತಾಗಿದೆ. ಇನ್ನೊರ್ವ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ಬಂಧನಕ್ಕೆ ವಿಶೇಷ ತಂಡ ಈಗಾಗಲೇ ಫೀಲ್ಡಿಗಿಳಿದು ತೀವ್ರ ಶೋಧ ಕಾರ್ಯದಲ್ಲಿ ತೊಡಗಿದೆ.