ಚಿಕ್ಕಬಳ್ಳಾಪುರ: ಚೇಳೂರು ತಾಲೂಕು ಬಿಳ್ಳೂರು ರಸ್ತೆಯ ಬೈರಗೊಲ್ಲಪಲ್ಲಿ ಗ್ರಾಮದ ಬಳಿ ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಮೃತರ ಗುರುತು ಪತ್ತೆಯಾಗಿಲ್ಲ. 15 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗೇಪಲ್ಲಿ ಬಸ್ ಬೆಳ್ಳೂರಿಗೆ ಸಂಚರಿಸುತ್ತಿತ್ತು. ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿದ್ದಾರೆ.