News Karnataka Kannada
Sunday, April 28 2024
ಕ್ರೈಮ್

ಹೆಬ್ಬಾಳ ಫ್ಲೈ ಓವರ್ ಮೇಲೆ​​ ವ್ಯಕ್ತಿಯನ್ನು ನೂಕಿಕೊಂಡು ಹೋದ ಕಾರು: ವಿಡಿಯೋ ​

Car pushes man over Hebbal flyover
Photo Credit : News Kannada

ಬೆಂಗಳೂರು: ಹೆಬ್ಬಾಳ  ಫ್ಲೈ ಓವರ್ ಮೇಲೆ ವ್ಯಕ್ತಿ ಯೋರ್ವನನ್ನು ಚಾಲಕ ಕಾರಿನಿಂದ ಸ್ವಲ್ಪ ದೂರದವರೆಗೆ ನೂಕಿಕೊಂಡು ಹೋದ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕಡೆಗೆ ಬರುವ ಹೆಬ್ಬಾಳ  ಫ್ಲೈ ಓವರ್ ಮೇಲೆ ಇಟಿಯಾಸ್ ವಾಹನವನ್ನು ನಿಲ್ಲಿಸಲಾಗಿತ್ತು. ಇಟಿಯಾಸ್​ ವಾಹನದ ಚಾಲಕ ಇದೇ ಫ್ಲೈ ಓವರ್​ ಮೇಲೆ ಬರುತ್ತಿದ್ದ ಇನ್ನೋವಾ ಕಾರಿಗೆ ಅಡ್ಡ ಹೋಗಿದ್ದಾನೆ. ಈ ವೇಳೆ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಆದರೂ ಕೂಡ ಇಟಿಯಾಸ್​ ವಾಹನ ಚಾಲಕ ಪಕ್ಕಕ್ಕೆ ಹೋಗಿಲ್ಲ. ಆಗ ಚಾಲಕ ಇನ್ನೋವಾ ಕಾರಿನಿಂದ, ಇಟಿಯಾಸ್​ ಚಾಲಕನನ್ನು ಸ್ವಲ್ಪ ದೂರದವರೆಗೆ ನೂಕಿಕೊಂಡು ಹೋಗಿದ್ದಾನೆ. ಬಳಿಕ ಕಾರು ನಿಲ್ಲಿಸಿ ಚಾಲಕ ಇಟಿಯಾಸ್​ ವಾಹನ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ​

ಈ ದೃಶ್ಯಾವಳಿಗಳು ಕಾರಿನ ಡ್ಯಾಶ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋವನ್ನು ಪ್ರದೀಪ್​ ಹೆರಳೆ ಎಂಬುವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿ,ಬೆಂಗಳೂರು ಸಂಚಾರ ಪೊಲೀಸರಿಗೆ ಟ್ಯಾಗ್​ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

“ಈ ಬಗ್ಗೆ ಅಂದು ಟ್ರಾಫಿಕ್​ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ. ಗಾಡಿಯಲ್ಲಿ ಪ್ಯಾಸೆಂಜರ್ ಇದ್ದರೂ ಕೂಡ ಕೆಎ 05, ಎಎಲ್ 7999 ವಾಹನ ಚಾಲಕನ ಅತಿರೇಕದ ವರ್ತನೆ ತೋರಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು