ಉತ್ತರ ಪ್ರದೇಶ: ಉದ್ಯಮಿಯ ಮನೆಗೆ ನುಗ್ಗಿ ದರೋಡೆ ಮಾಡಿ, ಅವರ ಪತ್ನಿಯನ್ನು ಕಟ್ಟಿಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ.
ಉದ್ಯಮಿ ತಮ್ಮ ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ವೈದ್ಯರನ್ನು ಭೇಟಿ ಮಾಡಲು ಹೊರಟಿದ್ದರು. ಅದೇ ಸಮಯಕ್ಕೆ ಐವರು ದುಷ್ಕರ್ಮಿಗಳು ಮನೆಗೆ ನುಗ್ಗಿ ಉದ್ಯಮಿಯ ಪತ್ನಿಯನ್ನು ಕಟ್ಟಿ ಹಾಕಿ ಸಾಮೂಹಿಕ ಅತ್ಯಾಚಾರ ನಡೆಸಿ ಪತ್ನಿಗೆ ಸಿಗರೇಟ್ನಿಂದ ಸುಟ್ಟಿದ್ದಾರೆ.
ಜತೆಗೆ ಮನೆಯಲ್ಲಿ ಇದ್ದ ಚಿನ್ನಾಭರಣಗಳು, 2 ಕೆಜಿ ಬೆಳ್ಳಿ , 1.5 ಲಕ್ಷ ನಗದು, ಸ್ಕೂಟರ್, ಎಲ್ಇಡಿ ಟಿವಿ ಕಳವು ಮಾಡಿದ್ದಾರೆ ಎಂದು ಉದ್ಯಮಿ ಪೊಲೀಸರಿಗೆ ತಿಳಿಸಿದ್ದಾರೆ.
ದರೋಡೆಕೋರರು ಬೆಲೆಬಾಳುವ ವಸ್ತುಗಳನ್ನು ಇಟ್ಟಿದ್ದ ಅಲ್ಮೆರಾಗಳು ಮತ್ತು ಕೊಠಡಿಗಳ ಬೀಗಗಳನ್ನು ಕತ್ತರಿಸಿದ್ದಾರೆ. ನಂತರ ಅವರು ಉದ್ಯಮಿಯ ಪತ್ನಿಗೆ ಮದ್ಯ ಕುಡಿಸಿದ್ದಾರೆ ಎಂದು ಬಿಜ್ನೋರ್ ನಿವಾಸಿ ಪೊಲೀಸರಿಗೆ ತಿಳಿಸಿದ್ದಾರೆ.