ಕುಣಿಗಲ್: ಮಾಂಸಕ್ಕಾಗಿ ಎಂಟು ಬಾವಲಿಗಳನ್ನು ಕೊಂದ ನಾಲ್ಕು ಆರೋಪಿಗಳನ್ನು ವಲಯ ಅರಣ್ಯಾಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿಯ ಹೊಂಬಾಳಮ್ಮ ಪೇಟೆಯ ರಂಗನಾಥ, ರಾಮಕೃಷ್ಣ, ಶಿವಶಂಕರ, ರಂಗನಾಥ ಬಂಧಿತರು.
ತಾಲೂಕಿನ ಕಾಡರಾಮನ ಹಳ್ಳಿಯ ಖಾಸಗಿ ವ್ಯಕ್ತಿಯ ಜಮೀನಿನ ಮರದಲ್ಲಿದ್ದ ಎಂಟು ಬಾವಲಿಗಳನ್ನು ಹೊಡೆದು ಹಾಕಿದ್ದರು. ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯ ಅಧಿಕಾರಿ ಜಗದೀಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬಾವಲಿ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.