News Karnataka Kannada
Monday, April 29 2024
ಕ್ರೈಮ್

ಲಿಮಾ: ಬಸ್‌ ಕಂದಕಕ್ಕೆ ಉರುಳಿ 24 ಮಂದಿ ಸಾವು

ಕ್ಯಾಂಟರ್ ವಾಹನವೊಂದು ಪಲ್ಟಿಯಾಗಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಬುಧವಾರ ನಡೆದಿದೆ. 
Photo Credit : IANS

ಲಿಮಾ: ಪೆರುವಿನ ಹುವಾನ್‌ಕಾವೆಲಿಕಾ ಪ್ರದೇಶದಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸೋಮವಾರ ಚುರ್ಕಾಂಪಾ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಪ್ರಾಪ್ತರು ಕೂಡ ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ಚುರ್ಕಾಂಪಾ ಇಂಟಿಗ್ರೇಟೆಡ್ ಹೆಲ್ತ್ ನೆಟ್‌ವರ್ಕ್ ಅನ್ನು ಉಲ್ಲೇಖಿಸಿ ನ್ಯೂಸ್ ಬ್ರಾಡ್‌ಕಾಸ್ಟರ್ ರೇಡಿಯೊ ಪೆರು ವರದಿ ಮಾಡಿದೆ.

ಗಾಯಾಳುಗಳನ್ನು ಹುವಾನ್ಕಾಯೊ, ಪಂಪಾಸ್ ಮತ್ತು ಅಯಾಕುಚೊ ಪಟ್ಟಣಗಳ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಆಂಕೊದ ಜಿಲ್ಲಾ ಮೇಯರ್ ಮ್ಯಾನುಯೆಲ್ ಜೆವಾಲ್ಲೋಸ್ ಈ ಬಗ್ಗೆ ಮಾತನಾಡಿದ್ದು ಹಿಮಕುಸಿತದ ಪರಿಣಾಮ ರಸ್ತೆಯು ಕಳಪೆಯಾಗಿದೆ. ಇದೇ ಕಾರಣದಿಂದ ಅಪಘಾತ ನಡೆದಿದೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು