News Karnataka Kannada
Friday, May 03 2024
ಕ್ರೈಮ್

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಭಾರತೀಯ ಮೂಲದ ವ್ಯಕ್ತಿ ಸೇರಿ 10 ಮಂದಿಗೆ ಜೈಲು

10 people, including an Indian-origin man, jailed for sexually assaulting children
Photo Credit : News Kannada

ನ್ಯೂಯಾರ್ಕ್: ಮಕ್ಕಳ ಲೈಂಗಿಕ ಸಂಬಂಧಿ ಅಪರಾಧಗಳಿಗೆ ಸಂಬಂಧಿಸಿದಂತೆ ಅಮೆರಿಕದ ಕೊಲೊರಾಡೋ ರಾಜ್ಯದಲ್ಲಿ ಪೊಲೀಸರು ಮತ್ತು ಕಾನೂನು ಜಾರಿ ಅಧಿಕಾರಿಗಳು ನಡೆಸಿದ ಪ್ರಮುಖ ರಹಸ್ಯ ಕಾರ್ಯಾಚರಣೆಯಲ್ಲಿ 56 ವರ್ಷದ ಭಾರತೀಯ ಮೂಲದ ವ್ಯಕ್ತಿ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ.

ಗ್ರ್ಯಾಂಡ್ ಜಂಕ್ಷನ್ ನಗರದ ನಿವಾಸಿ ಯೋಗೇಶ್ ಪಟೇಲ್ ನನ್ನು ಮಕ್ಕಳ ವೇಶ್ಯಾವಾಟಿಕೆ ಸಂಬಂಧಿಸಿದಂತೆ ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಮೆಸಾ ಕೌಂಟಿ ಶೆರಿಫ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಘಟನೆಗೆ ಸಂಬಂಧಿಸಿ 28 ರಿಂದ 68 ವರ್ಷ ವಯಸ್ಸಿನ 10 ಪುರುಷರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ವರ್ಷದ ಆಗಸ್ಟ್‌ನಲ್ಲಿ, 47 ವರ್ಷದ ಬ್ರಾಂಡನ್ ಬೌರೆಟ್‌ ಎಂಬಾತನನ್ನು 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಕ್ಕಾಗಿ ನ್ಯಾಯಾಲಯ 25 ವರ್ಷಗಳ ಶಿಕ್ಷೆ ವಿಧಿಸಿತ್ತು. ಕಳೆದ ವರ್ಷ ಅಮೆರಿಕದಲ್ಲಿ ಮಕ್ಕಳ ಲೈಂಗಿಕಅಪರಾಧಗಳ ಮೇಲೆ ಸುಮಾರು 350 ಶಿಕ್ಷಕರನ್ನು ಬಂಧಿಸಲಾಗಿತ್ತು ಎಂದು ವರದಿಯೊಂದು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು