News Karnataka Kannada
Monday, May 06 2024
ಭವಿಷ್ಯ

ಈ ರಾಶಿಯವರಿಗಿಂದು ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ

Horoscope
Photo Credit : NewsKarnataka

ಮೇಷ: ಅನಾರೋಗ್ಯ ಕಾಡಬಹುದು ಕಾಳಜಿ ವಹಿಸಿ. ಮಕ್ಕಳಿಂದ ತೊಂದರೆಯಾಗುವುದು. ಹಿರಿಯರ ಶಾಪಕ್ಕೆ ಗುರಿಯಾಗುವಿರಿ. ಬೇಕೆಂದೇ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ನೀವು ನಿಮ್ಮ ನಿಯಂತ್ರಣದಲ್ಲಿ ಇದ್ದರೆ ಯಾವ ಏರಿಳಿತವೂ ನಿಮ್ಮನ್ನು ಏನೂ ಮಾಡಲಾಗದು.

ವೃಷಭ: ಋಣ ರೋಗ ಬಾಧೆಗಳಿಂದ ಮುಕ್ತಿ. ಕುಟುಂಬದಲ್ಲಿ ವಾಗ್ವಾದಗಳು. ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು ಎದುರಾದಾವು.

ಮಿಥುನ: ನಾನಾ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ. ಶುಭ ಕಾರ್ಯ ಮುಂದೂಡಲ್ಪಡುವುದು. ಅನಾರೋಗ್ಯ ಸಮಸ್ಯೆ ಉಂಟಾದೀತು.

ಕಟಕ: ಮಾನಸಿಕ ಕಿರಿಕಿರಿ ಮತ್ತು ತೊಂದರೆ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.

ಸಿಂಹ: ಮಕ್ಕಳಿಂದ ಕಿರಿಕಿರಿ ಅನುಭವಿಸುವಿರಿ. ಅನಾರೋಗ್ಯ ನಿವಾರಣೆಗೆ ವೈದ್ಯರನ್ನು ಭೇಟಿ ಮಾಡಿ. ಕೆಲಸ ಕಾರ್ಯಗಳಲ್ಲಿ ವಿಘ್ನ.

ಕನ್ಯಾ: ಉದ್ಯೋಗ ಲಾಭವಿದೆ. ಸಾಲಗಾರರಿಂದ ಮುಕ್ತಿ. ಶತ್ರು ದಮನವಾಗುವುದು. ತಂತ್ರ ಬಾಧೆಗಳಿಗೆ ಗುರುಗಳಿಂದ ಮಾರ್ಗದರ್ಶನ.

ತುಲಾ: ಉದ್ಯೋಗದಲ್ಲಿ ಒತ್ತಡಗಳು ಹೆಚ್ಚುವವು. ಕಾಲು ನೋವು. ಮಂದತ್ವ. ಬುದ್ಧಿ ಚಾಂಚಲ್ಯ. ವೈರಾಗ್ಯದ ಭಾವ ಹೆಚ್ಚು ಕಾಡುವುದು. ನಿಮ್ಮ ಪ್ರಯತ್ನವು ಹೇಗೇ ಇದ್ದರೂ ದೈವದ ಯೋಜನೆ ಬೇರೆಯೇ ಇರುತ್ತದೆ ಎನ್ನುವ ಸತ್ಯವು ಅರಿವಿಗೆ ಬರಲಿದೆ. ದುಃಖಿಸುವ ಅಗತ್ಯವಿಲ್ಲ.

ವೃಶ್ಚಿಕ: ಆಕಸ್ಮಿಕ ಅವಘಡಗಳಿಂದ ಖರ್ಚು. ಸ್ಥಿರಾಸ್ತಿ, ಭೂಮಿ, ವಾಹನ ಖರೀದಿಯಲ್ಲಿ ಮೋಸ. ಕೆಲಸ ಕಾರ್ಯಗಳಲ್ಲಿ ಸೋಮಾರಿತನ. ನಿಮ್ಮ ಕುಟುಂಬ ಸದಸ್ಯರಿಗೆ ಸಮಯ ನೀಡಿ. ಏಕಾಗ್ರತೆಯಿಂದ ಕೆಲಸ ಮಾಡಿದರೆ ಅನಾಯಾಸವಾಗಿ ಗುರಿಯನ್ನು ತಲುಪಬಹುದು.

ಧನಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ. ಪ್ರಯಾಣಕ್ಕೆ ಅಡೆತಡೆ ಉಂಟಾಗುವುದು. ಅವಮಾನಗಳಿಗೆ ಗುರಿಯಾಗುವ ಸಂದರ್ಭ.

ಮಕರ: ವ್ಯವಹಾರ ಸ್ಥಳದಲ್ಲಿ ಕಿರಿಕಿರಿ ಅನುಭವಿಸುವಿರಿ. ಆರ್ಥಿಕ ಸಹಾಯ ಬರಲಿದೆ. ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ.

ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗುವುದು. ಉದ್ಯೋಗ ಬದಲಾವಣೆಗೆ ಅಡೆತಡೆ. ದಾಂಪತ್ಯದಲ್ಲಿ ವಿರಸ. ಸಮಾಧಾನಚಿತ್ತರಾಗಿರಿ.

ಮೀನ: ಅನಿರೀಕ್ಷಿತ ಘಟನೆಗಳಿಂದ ಮಾನಸಿಕ ಕಿರಿಕಿರಿ. ವಾಹನಗಳಿಂದ, ಕಬ್ಬಿಣದ ವಸ್ತುಗಳಿಂದ ಪೆಟ್ಟು. ಕೆಲಸ ಕಾರ್ಯಗಳಲ್ಲಿ ಅಡೆತಡೆ. ವೃತ್ತಿಯಲ್ಲಿ ನಿಮಗೆ ಸಂತೋಷದ ವಾತಾವರಣವು ಇರಲಿದೆ. ಸಮಾರಂಭಗಳಿಗೆ ಹೋಗಿ ಆಪ್ತರೊಂದಿಗೆ ಸಮಾಲೋಚನೆ ನಡೆಸಲಿದ್ದೀರಿ. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸವಾಗಲಿದೆ. ಸ್ವಂತ ಉದ್ಯೋಗಿಗಳಿಗೆ ಶುಭವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು