ಚಿಕ್ಕು ಮಿಲ್ಕ್ ಶೇಕ್ ಮನೆಯಲ್ಲಿ ತಯಾರಿಸಲು ಸುಲಭವಾದ ಮಿಲ್ಕ್ ಶೇಕ್ ಗಳಲ್ಲಿ ಒಂದಾಗಿದೆ. ಕೇವಲ ಮೂರು ಪದಾರ್ಥಗಳನ್ನು ಬಳಸಿ ತಯಾರಿಸಬಹುದಾಗಿದೆ. ಇಲ್ಲಿದೆ ಚಿಕ್ಕು ಮಿಲ್ಕ್ ಶೇಕ್ ಮಾಡುವ ಸುಲಭ ವಿಧಾನ.
ಬೇಕಾಗುವ ಸಾಮಾಗ್ರಿಗಳು:
1 ಕಪ್ ತಾಜಾ ಚಿಕ್ಕು
3/4 ಕಪ್ ಹಾಲು
2 ಟೀಸ್ಪೂನ್ ಸಕ್ಕರೆ
ಮಾಡುವ ವಿಧಾನ:
1 ಕಪ್ ಕತ್ತರಿಸಿದ ಚಿಕ್ಕು 2 ಟೀಸ್ಪೂನ್ ಸಕ್ಕರೆ ಮತ್ತು 3/4 ಕಪ್ ಹಾಲನ್ನು ಬ್ಲೆಂಡರ್ ಅಥವಾ ಮಿಕ್ಸರ್ ಜಾರ್ ನಲ್ಲಿ ಸೇರಿಸಿ ನಯವಾಗಿ ರುಬ್ಬಿ ಸರ್ವಿಂಗ್ ಗ್ಲಾಸ್ ಗೆ ಸುರಿದು 20 ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿಟ್ಟರೆ ರುಚಿ ರುಚಿಯಾದ ಚಿಕ್ಕು ಮಿಲ್ಕ್ ಶೇಕ್ ಸವಿಯಲು ಸಿದ್ದ.