ಸಿಹಿಯಾದ ಚಾಕಲೇಟ್ ಬರ್ಫಿ ಮಾಡುವುದು ಹೇಗೆ

ಸಿಹಿ ಪದಾರ್ಥ ಯಾರಿಗೆ ಇಷ್ಟ ಇಲ್ಲ ಹೇಳಿ ಎಲ್ಲರಿಗೂ ಇಷ್ಟ ಆದರೆ ಅದನ್ನು ಮಾಡುವುದೇ ಕಷ್ಟ. ನಿಮಗಾಗಿ ಸುಲಭವಾಗಿ ತಯಾರಾಗುವ ಚಾಕಲೇಟ್ ಬರ್ಫಿ ಮಾಡುವುದು ಹೇಗೆ ಎಂದು ನೋಡೋಣ.

ಬೇಕಾಗುವ ಪದಾರ್ಥಗಳು:
ಹಾಲಿನ ಪುಡಿ – 2 ಕಪ್
ಕೋಕೋ ಪೌಡರ್ – ಕಾಲು ಕಪ್
ಕಂಡೆನ್ಸ್ಡ್ ಮಿಲ್ಕ್ – 400 ಗ್ರಾಂ
ಹಾಲು – ಕಾಲು ಕಪ್
ಏಲಕ್ಕಿ ಪುಡಿ – 1 ಟೀಸ್ಪೂನ್
ಬೆಣ್ಣೆ – 2 ಟೀಸ್ಪೂನ್
ತುಪ್ಪ – 2 ಟೀಸ್ಪೂನ್

ಮಾಡುವ ವಿಧಾನ: ಒಂದು  ಪ್ಯಾನ್ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಹಾಕಿ ಕರಗಿಸಿಕೊಳ್ಳಿ. ಉರಿಯನ್ನು ಆಫ್ ಮಾಡಿ, ಹಾಲಿನ ಪುಡಿ ಹಾಗೂ ಕೋಕೋ ಪೌಡರ್ ಅನ್ನು ಸೇರಿಸಿ  ಸೌಟಿನ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಬಳಿಕ ಕಂಡೆನ್ಸ್ಡ್ ಮಿಲ್ಕ್ ಅನ್ನು ಸೇರಿಸಿ.  ಉರಿಯನ್ನು ಆನ್ ಮಾಡಿ, ಕಡಿಮೆ ಉರಿಯಲ್ಲಿ ಮಿಶ್ರಣ ಮಾಡಿಕೊಳ್ಳಿ.

ಬಳಿಕ ಹಾಲು ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ, ಸುಮಾರು 10-12 ನಿಮಿಷಗಳ ವರೆಗೆ ಆಗಾಗ ಬೆರೆಸುತ್ತಾ ಬೇಯಿಸಿಕೊಳ್ಳಿ.
ಚಾಕ್ಲೇಟ್ ಮಿಶ್ರಣ ಪ್ಯಾನ್‌ನ ಬದಿಯನ್ನು ಬಿಡಲು ಪ್ರಾರಂಭಿಸಿದಾಗ ಉರಿಯನ್ನು ಆಫ್ ಮಾಡಿ, ಅದಕ್ಕೆ ತುಪ್ಪದಿಂದ ಗ್ರೀಸ್ ಮಾಡಿ, ಒಂದು ಪ್ಲೇಟ್‌ಗೆ ವರ್ಗಾಯಿಸಿ.

ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಒಂದು ಚಮಚ ತುಪ್ಪವನ್ನು ನಿಮ್ಮ ಕೈಗೆ ಸವರಿಕೊಂಡು ಪುಟ್ಟ ಪುಟ್ಟ ಉಂಡೆಗಳನ್ನು ತಯಾರಿಸಿಕೊಳ್ಳಿ. ಸುಮಾರು 3-4 ಗಂಟೆಗಳಲ್ಲಿ ಅದು ಸೆಟ್ ಆಗಲು ಬಿಡಿ .

Ashika S

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

1 hour ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

1 hour ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

2 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

2 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

2 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

2 hours ago