ರುಚಿಕರವಾದ ಸಿಹಿಯಾದ ಜಿಲೇಬಿ ಮಾಡುವ ಸರಳ ವಿಧಾನ

ಬಗೆಗೆಯ ಸಿಹಿ ತಿನಿಸು ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಜಿಲೇಬಿ. ಈ ಸಿಹಿಯಾದ ಜಿಲೇಬಿ ಮಾಡುವ ಸರಳ ವಿಧಾನ.

ಬೇಕಾಗುವ ಪದಾರ್ಥಗಳು:
* ಸಕ್ಕರೆ- 2 ಕಪ್
* ಮೈದಾ ಹಿಟ್ಟು-2 ಕಪ್
* ಮೊಸರು-1 ಕಪ್
* ಬೇಕಿಂಗ್ ಸೋಡಾ- ಸ್ವಲ್ಪ
* ಕೇಸರಿ ದಳ- ಸ್ವಲ್ಪ
* ಹಾಲು- 1 ಕಪ್
* ನಿಂಬೆ ರಸ- ಸ್ವಲ್ಪ
* ಏಲಕ್ಕಿ ಪುಡಿ- ಸ್ವಲ್ಪ
* ಅಡುಗೆ ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:

ಮೊದಲಿಗೆ ಹಾಲನ್ನು ಕಾಯಿಸಿ ಅದಕ್ಕೆ ಕೇಸರಿ ದಳವನ್ನು ಹಾಕಿ ನೆನೆಯಲು ಬಿಡಿ. ನಂತರ ಒಂದು ಪಾತ್ರೆಗೆ ಸಕ್ಕರೆ ಹಾಗೂ ನೀರು ಹಾಕಿ ಅಂಟಿನ ಹದಕ್ಕೆ ಪಾಕವಾಗುವಂತೆ ಕಾಯಿಸಿ. ಈ ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ, ಹಾಗೂ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಅರ್ಧ ಹಾಕಿ, ಮತ್ತರ್ಧ ತೆಗೆದಿಡಿ. ಬಳಿಕ ಒಂದು ಪಾತ್ರೆಗೆ ಮೈದಾ ಹಿಟ್ಟು, ಮೊಸರು ಸ್ವಲ್ಪ ನೀರು ಹಾಕಿಕೊಂಡು ಇಡ್ಲಿ ಹಿಟ್ಟಿನಂತೆ ಮಾಡಿಕೊಳ್ಳಿ. ನಂತರ ಉಳಿದರ್ಧ ಕೇಸರಿ ಹಾಗೂ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಒಲೆಯ ಮೇಲೆ ಬಾಣಲೆಯಿಟ್ಟು ಅಡುಗೆ ಎಣ್ಣೆ ಕಾಯಿಸಿಕೊಳ್ಳಿ. ನಂತರ ಹಿಟ್ಟನ್ನು ಖಾಲಿ ಸಾಸ್ ಬಾಟಲಿಗೆ ಹಾಕಿ ಎಣ್ಣೆಗೆ ಸುರುಳಿಯಾಕಾರದಲ್ಲಿ ಬಿಡಿ. ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ನಂತರ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ ಎರಡೂ ಬದಿಯಲ್ಲೂ ಎರಡೆರಡು ನಿಮಿಷ ನೆನೆಸಿ ತೆಗೆದರೆ ರುಚಿಕರವಾದ ಜಿಲೇಬಿ ಸವಿಯಲು ಸಿದ್ಧವಾಗುತ್ತದೆ.

Sneha Gowda

Recent Posts

ಸಂತ್ರಸ್ತೆ ಅಪಹರಣ ಕೇಸ್‌ : ಭವಾನಿ ರೇವಣ್ಣ ಸಂಬಂಧಿ ಬಂಧನ

ಈಗಾಗಲೇ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಅಲ್ಲದೇ ಅವರ ತಂದೆ ಸಚಿವ ಹೆಚ್​ಡಿ…

5 mins ago

ಭಾರೀ ಮಳೆ: ಮಣ್ಣಿನ ಕುಸಿತದಿಂದ 37 ಮಂದಿ ಮೃತ್ಯು, 74 ಕ್ಕೂ ಹೆಚ್ಚು ಜನ ಕಾಣೆ

ಬ್ರೆಜಿಲ್‌ನ ದಕ್ಷಿಣ ರಾಜ್ಯ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಭಾರೀ ಮಳೆ ಮತ್ತು ಮಣ್ಣಿನ ಕುಸಿತದಿಂದಾಗಿ 37 ಮಂದಿ ಸಾವಿಗೀಡಾಗಿದ್ದಾರೆ.…

16 mins ago

ಆಫ್ರಿಕಾದಲ್ಲಿ ಮಳೆಯಿಂದ ಬಾರಿ ಪ್ರವಾಹ : 350ಕ್ಕೂ ಹೆಚ್ಚು ಸಾವು, 90 ಜನರು ನಾಪತ್ತೆ

ಕೀನ್ಯಾ ಮತ್ತು ತಂಜಾನಿಯಾದಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಯಿಂದಾಗಿ ರಸ್ತೆಗಳೆಲ್ಲ ನದಿಯಂತಾಗಿವೆ. ಮನೆಯಲ್ಲಿ ನಗುಗ್ಗಿದ ನೀರು ಮನೆ…

32 mins ago

ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ : ವಿಡಿಯೋ ವೈರಲ್‌

ಕಜಕೀಸ್ತಾನದ  ಮಾಜಿ ಸಚಿವನೋರ್ವ ತನ್ನ ಪತ್ನಿಯನ್ನು ದಾರುಣವಾಗಿ ಥಳಿಸಿದ್ದು ಪರಿಣಾಮವಾಗಿ ಎಂಟು ಗಂಟೆಗಳಲ್ಲಿ ಆಕೆ ಕೊನೆಯುಸಿರೆಳೆದಿರುವ ದಾರುಣ ಘಟನೆ ನಡೆದಿದೆ.

48 mins ago

ಸಿಲಿಂಡರ್‌ ಬ್ಲಾಸ್ಟ್‌ನಿಂದ ಮನೆಯಲ್ಲಿ ಬೆಂಕಿ : 3 ವರ್ಷದ ಮಗು ಮೃತ್ಯು, 5 ಮಂದಿಗೆ ಗಾಯ

ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ 3 ವರ್ಷದ ಮಗು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿ ನಡೆದಿದೆ…

54 mins ago

ಬೀದರ್‌ನ ’14 ಪರೀಕ್ಷಾ ಕೇಂದ್ರಗಳಲ್ಲಿ ‘ನೀಟ್‌’ ಪರೀಕ್ಷೆ

'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಜಿಲ್ಲೆಯ 14 ಪರೀಕ್ಷಾ ಕೇಂದ್ರಗಳಲ್ಲಿ ಮೇ 5ರಂದು ನಡೆಯಲಿದೆ' ಎಂದು ನೀಟ್‌ ಸಂಯೋಜಕ…

1 hour ago