News Karnataka Kannada
Monday, May 13 2024
ಅಡುಗೆ ಮನೆ

ಉಳಿದ ಇಡ್ಲಿಗಳಿಂದ ಮಾಡಿ ರುಚಿಕರವಾದ ಇಡ್ಲಿ ಮಂಚೂರಿಯನ್

Idli Manchurian
Photo Credit : Wikipedia

ಉಳಿದ ತಿಂಡಿಗಳಿಂದ ಏನಾದರು ಹೊಸ ತಿಂಡಿ ಮಾಡಬಹುದಾ ಎಂಬ ಯೋಚನೆ ಸಾಮಾನ್ಯ ಗೃಹಿಣಿಯರಿಗೆ ಬಂದೇ ಬರುತ್ತದೆ. ಇಂದು ಅದೇ ರೀತಿಯಾದ ಉಳಿದ ಇಡ್ಲಿಗಳಿಂದ ಮಾಡಬಹುದಾದ ಇಡ್ಲಿ ಮಂಚೂರಿಯನ್ ರೆಸಿಪಿ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ.

ಬೇಕಾಗುವ ಸಾಮಗ್ರಿಗಳು:
ಇಡ್ಲಿ- 5
ಹೆಚ್ಚಿದ ಟೊಮೆಟೊ- 4 ಚಮಚ
ಹುಣಸೇ ಹಣ್ಣಿನ ಪೇಸ್ಟ್- ಅರ್ಧ ಚಮಚ
ಗರಂ ಮಸಾಲ ಪೌಡರ್- 1 ಚಮಚ
ಉಪ್ಪು- 1 ಚಮಚ
ಹೆಚ್ಚಿದ ಈರುಳ್ಳಿ- ಒಂದು ಹಿಡಿ
ಹೆಚ್ಚಿದ ಹಸಿಮೆಣಸು- 2
ಅರಶಿಣ ಪೌಡರ್- 1 ಚಮಚ
ಎಣ್ಣೆ- 2 ಚಮಚ
ಜೀರಿಗೆ- ಅರ್ಧ ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು- ಸ್ವಲ್ಪ

ಇಡ್ಲಿ ಮಂಚೂರಿಯನ್ ಮಾಡುವ ವಿಧಾನ:

ಮೊದಲಿಗೆ ಇಡ್ಲಿಗಳನ್ನು ಚೌಕಾಕಾರದಲ್ಲಿ ತುಂಡು ಮಾಡಿಕೊಳ್ಳಿ.

ಬಳಿಕ ಒಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಗ್ಯಾಸ್‌ನಲ್ಲಿ ಇಡಿ. ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಅರ್ಧ ಚಮಚ ಜೀರಿಗೆಯನ್ನು ಹಾಕಿ.

ಜೀರಿಗೆ ಕೆಂಪು ಬಣ್ಣಕ್ಕೆ ಬಂದ ಮೇಲೆ ಅದಕ್ಕೆ ಹೆಚ್ಚಿದ ಟೊಮೆಟೊ, ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿಯನ್ನು ಸೇರಿಸಿಕೊಂಡು 2 ನಿಮಿಷಗಳ ಕಾಲ ಹುರಿದುಕೊಳ್ಳಿ. ಬಳಿಕ ಅದಕ್ಕೆ ಹುಣಸೆಹಣ್ಣಿನ ಪೇಸ್ಟ್ ಅನ್ನು ಸೇರಿಸಿಕೊಂಡು ಚನ್ನಾಗಿ ತಿರುವಿಕೊಳ್ಳಿ.

ಬಳಿಕ ಅದಕ್ಕೆ ಒಂದು ಚಮಚ ಉಪ್ಪು, ಗರಂ ಮಸಾಲ ಮತ್ತು ಅರಶಿಣ ಪೌಡರ್ ಅನ್ನು ಹಾಕಿಕೊಳ್ಳಿ. ಖಾರ ಜಾಸ್ತಿ ಬೇಕಾದವರು ಸ್ವಲ್ಪ ಅಚ್ಚಖಾರದ ಪೌಡರ್ ಸೇರಿಸಿಕೊಳ್ಳಬಹುದು.

ಟೊಮೆಟೋ ಮೃದುವಾಗಲು ಪ್ರಾರಂಭವಾದ ಮೇಲೆ ಅದಕ್ಕೆ ತುಂಡು ಮಾಡಿದ್ದ ಇಡ್ಲಿಗಳನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿ. ಬಳಿಕ ಇದನ್ನು ಐದು ನಿಮಿಷಗಳ ಕಾಲ ಆರಲು ಬಿಡಿ.

ಇದನ್ನು ಒಂದು ಪ್ಲೇಟ್‌ಗೆ ಹಾಕಿ ಅದರ ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಈಗ ಇಡ್ಲಿ ಮಂಚೂರಿಯನ್ ತಿನ್ನಲು ರೆಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು