ಸಂಜೆ ಏನಾದರೂ ಬಿಸಿಬಿಸಿ, ಖಾರ ಖಾರವಾಗಿ ತಿನ್ನೋಣ ಎನ್ನಿಸುವಾಗ ಮನೆಯಲ್ಲಿ ಬ್ರೆಡ್ ಇದ್ದರೆ ಸಿಂಪಲ್ ಆಗಿ ಮಸಾಲ ಬ್ರೆಡ್ ಮಾಡಬಹುದು. ಮಸಾಲಾ ಬ್ರೆಡ್ ಮಾಡುವ ಸರಳ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
1. ಕಡ್ಲೆಹಿಟ್ಟು – ಒಂದೂವರೆ ಕಪ್
2. ಅಕ್ಕಿಹಿಟ್ಟು – 1 ಕಪ್
3. ಖಾರದ ಪುಡಿ – 2 ಚಮಚ
4. ಉಪ್ಪು – ರುಚಿಗೆ ತಕ್ಕಷ್ಟು
5 ಕೊತ್ತಂಬರಿ ಸೊಪ್ಪು- ಸ್ವಲ್ಪ
6. ಎಳ್ಳು – 2 ಚಮಚ
7. ಎಣ್ಣೆ- ಕರಿಯಲು
8. ಬ್ರೆಡ್ ಸ್ಲೈಸ್ – 6
ಮಾಡುವ ವಿಧಾನ: ಒಂದು ಬೌಲ್ಗೆ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಎಳ್ಳು, 2 ಚಮಚ ಎಣ್ಣೆ ಮತ್ತು ನೀರು ಹಾಕಿ ಬೊಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಬ್ರೆಡ್ ಸ್ಲೈಸ್ ಅನ್ನು ಆ ಹಿಟ್ಟಿನಲ್ಲಿ ಅದ್ದಿಕೊಂಡು ಅದನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿದರೆ ಬಿಸಿಬಿಸಿಯಾದ ಮಸಾಲಾ ಬ್ರೆಡ್ ಸವಿಯಲು ಸಿದ್ದ.