News Karnataka Kannada
Wednesday, May 01 2024
ಅಡುಗೆ ಮನೆ

ಹಲಸಿನ ಕಾಯಿ ಹಪ್ಪಳ ಮಾಡುವ ಸರಳ ವಿಧಾನ ಇಲ್ಲಿದೆ

Here's a simple way to make jackfruit papad
Photo Credit : Wikimedia

ಮಳೆ ಸೀಸನ್ ಆರಂಭ ಆದಂಗೆ ಜನರು ಎಣ್ಣೆಯಲ್ಲಿ ಕರಿದಂತ ಬಿಸಿಬಿಸಿ ತಿಂಡಿ ತಿನ್ನಲು ಎಲ್ಲರು ಇಷ್ಟ ಪಡುತ್ತಾರೆ. ಅಂತವರಿಗಾಗಿ ಹಲಸಿನ ಕಾಯಿ ಹಪ್ಪಳ ಮಾಡಲು ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು: ಮಧ್ಯಮ ಗಾತ್ರದ ಹಲಸಿನ ಕಾಯಿ, 2 ಚಮಚ ಕೆಂಪು ಮೆಣಸಿನ ಪುಡಿ, ಸ್ವಲ್ಪ ಹುಣಸೆ ಹುಳಿ, ರುಚಿಗೆ ತಕ್ಕಷ್ಟು ಉಪ್ಪು, 2 ಸಣ್ಣ ಪ್ಲ್ಯಾಸ್ಟಿಕ್ ಶೀಟ್‌ಗಳು, 1 ದೊಡ್ಡ ಪ್ಲ್ಯಾಸ್ಟಿಕ್ ಶೀಟ್ ಅಥವಾ ಕಾಟನ್ ಬಟ್ಟೆ

ಮಾಡುವ ವಿಧಾನ: ಹಲಸಿನ ತೊಳೆಗಳನ್ನುಇಡ್ಲಿ ಪಾತ್ರೆಯಲ್ಲಿ ಚೆನ್ನಾಗಿ ಬೇಯಿಸಿ. ಗ್ರೈಂಡರ್‌ನಲ್ಲಿ ಬೇಯಿಸಿದ ಸೊಳೆಯನ್ನು ಹಾಕಿ, ಅದಕ್ಕೆ ಉಪ್ಪು, ಖಾರ ಹಾಗೂ ಸ್ವಲ್ಪ ಹುಳಿ ಹಾಕಿ. ಪೂರ್ತಿ ನುಣ್ಣಗೆ ತಿರುಗಿಸಿ. ಈ ಪೇಸ್ಟನ್ನು ತೆಗೆದುಕೊಂಡು ಒದ್ದೆ ಕೈಯ್ಯಲ್ಲಿ ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿಕೊಳ್ಳಿ. ನಂತರ ಎರಡು ಪ್ಲ್ಯಾಸ್ಟಿಕ್ ಶೀಟ್ ಗಳಿಗೆ ಎಣ್ಣೆ ಸವರಿಕೊಳ್ಳಿ. ಒಂದು ಶೀಟ್ ಮೇಲೆ ಹಲಸಿನ ಉಂಡೆಯಿಟ್ಟು ಮೇಲೆ ಇನ್ನೊಂದು ಶೀಟ್‌ನಿಂದ ಮುಚ್ಚಿಬಿಡಿ. ಇದರ ಮೇಲೆ ಮರದ ಮಣೆ ಇಟ್ಟು ಒತ್ತಿ. ಬಳಿಕ ನಿಧಾನವಾಗಿ, ಮೇಲಿನ ಪಾಲಿಥಿನ್ ಶೀಟ್ ಎತ್ತಿದರೆ ಚಪಾತಿಯಂತೆ ಹಿಟ್ಟು ಹರಡಿರುತ್ತದೆ. ಇವುಗಳನ್ನು ದೊಡ್ಡದಾದ ಪ್ಲ್ಯಾಸ್ಟಿಕ್ ಇಲ್ಲವೇ ಸ್ವಚ್ಛವಾದ ಬಟ್ಟೆ ಮೇಲೆ ಒಂದರ ಪಕ್ಕ ಒಂದನ್ನು ಹಾಕಿ 3-4 ಗಂಟೆಗಳ ಕಾಲ ಬಿಸಿಲಿನಲ್ಲಿಡಿ. ನಂತರ ಒಮ್ಮೆ ಎಲ್ಲ ಹಪ್ಪಳಗಳನ್ನು ತಿರುವಿ ಹಾಕಿ. ಮತ್ತೆ 3-4 ಗಂಟೆ ಬಿಡಿ. ಎರಡರಿಂದ ಮೂರು ದಿನ ಒಣಗಿಸಿದ ಬಳಿಕ ಹಪ್ಪಳಗಳನ್ನು ಡಬ್ಬಿಯಲ್ಲಿ ಹಾಕಿ ತೆಗೆದಿಟ್ಟುಕೊಳ್ಳಿ. ಬೇಕೆಂದಾಗ ಎಣ್ಣೆಯಲ್ಲಿ ಕರಿದು ತಿನ್ನಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು