ಚಿಕನ್ ಕಬಾಬ್ ಸಾಮಾನ್ಯವಾಗಿ ಎಲ್ಲಾ ನಾನ್ ವೆಜ್ ಪ್ರಿಯರು ಇಷ್ಟಪಡುತ್ತಾರೆ. ಅಂತಹವರಿಗೆ ಇಲ್ಲಿದೆ ಸಿಂಪಲ್ ಆಗಿ ಚಿಕನ್ ಕಬಾಬ್ ಮಾಡುವ ವಿಧಾನ.
ಚಿಕನ್ ಕಬಾಬ್ ಮಾಡಲು ಬೇಕಾಗುವ ಸಾಮಾಗ್ರಿಗಳು: 500 ಗ್ರಾಂ. ಕೋಳಿಮಾಂಸ, 1 ಟೀ ಸ್ಪೂನ್ ಮೆಣಸಿನ ಪೇಸ್ಟ್, 1 ಸ್ಪೂನ್ ಶುಂಠಿ ಪೇಸ್ಟ್, ಜೀರಿಗೆ ಪುಡಿ, ನಿಂಬೆ ರಸ, ಎಣ್ಣೆ, 1 ಟೀಸ್ಪೂನ್ ಕೊತ್ತಂಬರಿ ಪುಡಿ, ಗರಂ ಮಸಾಲ, ಒಂದು ಚಿಟಿಕೆ ಅರಿಶಿನ.
ತಯಾರಿಸುವ ವಿಧಾನ:
ಮೊದಲಿಗೆ ಕೋಳಿಮಾಂಸವನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆದು, ಅದನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ ನಂತರ ಮೊದಲೇ ಬಿಸಿಯಾಗಿರುವ ಎಣ್ಣೆಯಲ್ಲಿ ಮಾಂಸದ ತುಂಡುಗಳನ್ನು 10 ನಿಮಿಷಗಳವರೆಗೆ ಹುರಿಯಿರಿ.