ಖರ್ಜೂರದ ಹೋಳಿಗೆ ಮಾಡಲು ಇಲ್ಲಿದೆ ಸರಳ ವಿಧಾನ

ಮನೆಯಲ್ಲಿ ಏನಾದರೂ ಶುಭಸಮಾರಂಭಗಳು ಇದ್ದರೆ ಅಲ್ಲಿ ಏನಾದರೂ ಸಿಹಿತಿಂಡಿ ಮಾಡುವುದು ಸಾಮಾನ್ಯ. ಇಂದು ನಾವು ಮನೆಯಲ್ಲಿಯೇ ಮಾಡಬಹುದಾದ ತಿಂಡಿ ಬಗ್ಗೆ ತಿಳಿದುಕೊಳ್ಳೋಣ. ಖರ್ಜೂರ ಇದರ ಬಗ್ಗೆ ನಮಗೆಲ್ಲರಿಗೂ ಗೊತ್ತು ಆರೋಗ್ಯದ ದೃಷ್ಟಿಯಿಂದಲೂ ಇದು ಸಹಕಾರಿ. ಜೊತೆಗೆ ತಿನ್ನಲು ರುಚಿಯಾಗಿರುತ್ತದೆ. ಈ ಖರ್ಜೂರದ ಹೋಳಿಗೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಮೊದಲಿಗೆ ಮೈದಾಹಿಟ್ಟು, ಗೋಧಿ ಹಿಟ್ಟು ಮತ್ತು ಚಿರೋಟಿ ರವೆಯನ್ನು ಚೆನ್ನಾಗಿ ಬೆರೆಸಿ, ಅದಕ್ಕೆ ಉಪ್ಪು ಮತ್ತು ತುಪ್ಪವನ್ನು ಬೆರೆಸಿ. ಬಳಿಕ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕಿಂತ ತುಂಬಾ ಮೃದುವಾಗಿ ಕಲಸಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಎಳ್ಳು ಫ್ರೈ ಮಾಡಿ ಪುಡಿ ಮಾಡಿಟ್ಟುಕೊಂಡುಬಿಡಿ. ಈಗ ಇನ್ನೊಂದು ಬಾಣಲೆಯಲ್ಲಿ ಬೆಲ್ಲ ಮತ್ತು ಸ್ವಲ್ಪ ನೀರು ಸೇರಿಸಿ ಪಾಕ ಮಾಡಿ, ತಣಿಯಲು ಬಿಡಿ. ಬೆಲ್ಲದ ಪಾಕಕ್ಕೆ ಕತ್ತರಿಸಿಟ್ಟ ಖರ್ಜೂರ ಸೇರಿಸಿ ಮತ್ತೆ ಕುದಿಸಿ. ಅದು ದಪ್ಪಗಾಗುವವರೆಗೆ ಹಾಗೆ ಬಿಡಿ.  ನಂತರ ಅದಕ್ಕೆ ಏಲಕ್ಕಿ ಮತ್ತು ಎಳ್ಳಿನ ಪುಡಿ ಬೆರೆಸಿ. ಈ ಎಲ್ಲಾ ಮಿಶ್ರಣ ಮಾಡಿ ಇಡಿ.

ಈಗ ಮೊದಲು ತಯಾರಿಸಿಟ್ಟ ಹಿಟ್ಟಿನಿಂದ ಉಂಡೆ ತಯಾರಿಸಿ ಸಣ್ಣ ಸಣ್ಣ ಚಪಾತಿ ತಯಾರಿಸಿ.ಇದರ ಮಧ್ಯದಲ್ಲಿ ಬೆಲ್ಲ ಮತ್ತು ಖರ್ಜೂರದ ಮಿಶ್ರಣ ಇಟ್ಟು ಮತ್ತೆ ಉಂಡೆ ಕಟ್ಟಿ ಇನ್ನೊಂದು ಬಾರಿ ರೋಲ್‌ ಮಾಡಿ ಸಣ್ಣ ಸಣ್ಣ ಚಪಾತಿ ತಯಾರಿಸಿ. ಒಂದು ತವಾದಲ್ಲಿ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಒಬ್ಬಟ್ಟು ಹಾಕಿ ಎರಡು ಕಡೆ ಚೆನ್ನಾಗಿ ಕಾಯಿಸಿ. ತುಪ್ಪದ ಜೊತೆ ಸವಿಯಿರಿ.

Gayathri SG

Recent Posts

ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಪ್ರಚಾರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಭಾಗಿ

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ್‌ ಅಸೂಟಿ ಅವರ ಪರವಾಗಿ ಕುಂದಗೋಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಬೃಹತ್ ಬಹಿರಂಗ ಪ್ರಚಾರ…

9 mins ago

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮೇಲೆ ಬರಲಿದೆ ಬಯೋಪಿಕ್

ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈ  ಅವರು ಬಿಜೆಪಿ ಸೇರ್ಪಡೆ ಆಗಿ ರಾಜಕೀಯಕ್ಕೆ ಕಾಲಿಟ್ಟರು. ಈಗ  ಕೊಯಿಮತ್ತೂರು ಕ್ಷೇತ್ರದಿಂದ ಬಿಜೆಪಿ…

18 mins ago

ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಅರವಿಂದರ್ ಸಿಂಗ್ ಲವ್ಲಿ

ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಅರವಿಂದರ್ ಸಿಂಗ್ ಲವ್ಲಿ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

43 mins ago

ಕಾರು ಬೈಕಿನ ನಡುವೆ ಅಪಘಾತ; ಸವಾರ ಮೃತ್ಯು

ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತಿಬ್ಬರಿಗೆ ಪೆಟ್ಟಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ…

49 mins ago

ಪರಶುರಾಮ ಮೂರ್ತಿಯ ಕಾಮಗಾರಿ ನಡೆಸಲು ಕಾಂಗ್ರೆಸ್ ಅಡ್ಡಿ: ನವೀನ್‌  ನಾಯಕ್

ಪರಶುರಾಮ ಮೂರ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಕಾಮಗಾರಿ ಆರಂಭಕ್ಕೆ ಜಿಲ್ಲಾಡಳಿತ ತಡೆಯೊಡ್ಡುವ ಮೂಲಕ ಪರೋಕ್ಷವಾಗಿ…

1 hour ago

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹುಲಿ ಮೃತದೇಹ ಪತ್ತೆ

ಗಂಡು ಹುಲಿಯೊಂದರ ಮೃತದೇಹ  ಬಂಡೀಪುರ ಹುಲಿ ಸಂರಕ್ಷಿತ  ಪ್ರದೇಶದ  ಮೈಸೂರು ಜಿಲ್ಲೆಯ  ಹೆಡಿಯಾಲ ಉಪ-ವಿಭಾಗದ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಕಟ್ಟೆಯ ಅರಣ್ಯ ಪ್ರದೇಶದಲ್ಲಿ  ಪತ್ತೆಯಾಗಿದ್ದು, ವಯೋಸಹಜವಾಗಿ…

1 hour ago