News Karnataka Kannada
Saturday, April 27 2024
ಅಡುಗೆ ಮನೆ

ಸಂಜೆಯ ಚಹಾದ ಜೊತೆ ಸವಿಯಲು ರುಚಿಕರ: ಚೋಕೋ ಚಿಪ್ ಕುಕ್ಕೀಸ್

ಸಂಜೆ ಚಹಾದ ಜೊತೆ ಜೊತೆ ಕೆಲವರಿಗೆ ಬಿಸ್ಕೆಟ್ ತಿನ್ನುವ ಅಭ್ಯಾಸವಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕೆಲವೇ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಚೋಕೋ ಚಿಪ್ ಕುಕ್ಕೀಸ್ ಯಾವ ರೀತಿ ಮಾಡುವುದು ಎಂಬುದನ್ನು ನೋಡೋಣ.
Photo Credit : Pixabay

ಸಂಜೆ ಚಹಾದ ಜೊತೆ ಜೊತೆ ಕೆಲವರಿಗೆ ಬಿಸ್ಕೆಟ್ ತಿನ್ನುವ ಅಭ್ಯಾಸವಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕೆಲವೇ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಚೋಕೋ ಚಿಪ್ ಕುಕ್ಕೀಸ್ ಯಾವ ರೀತಿ ಮಾಡುವುದು ಎಂಬುದನ್ನು ನೋಡೋಣ.

ಬೇಕಾಗುವ ಸಾಮಗ್ರಿಗಳು:
ಬೆಣ್ಣೆ- 100 ಗ್ರಾಂ
ಚೋಕೋ ಚಿಪ್ಸ್ – 2 ಕಪ್
ಬ್ರೌನ್ ಶುಗರ್ – 1 ಕಪ್
ಸಕ್ಕರೆ – ಅರ್ಧ ಕಪ್
ಮೈದಾ ಹಿಟ್ಟು – 2 ಕಪ್
ಬೇಕಿಂಗ್ ಸೋಡಾ – 1 ಚಮಚ
ವೆನಿಲ್ಲಾ ಎಸೆನ್ಸ್- 2 ಚಮಚ
ಉಪ್ಪು – ಅರ್ಧ ಚಮಚ
ಮೊಟ್ಟೆ – 2

ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ಬೆಣ್ಣೆ ಹಾಕಿಕೊಂಡು ಅದಕ್ಕೆ ಬ್ರೌನ್ ಶುಗರ್, ಸಕ್ಕರೆ ಹಾಕಿಕೊಂಡು ಗಂಟಿಲ್ಲದಂತೆ ಚನ್ನಾಗಿ ತಿರುವಿಕೊಳ್ಳಿ. ಬೆಣ್ಣೆ ತುಂಬಾ ಗಟ್ಟಿಯಾಗಿರಬಾರದು. ಈ ಮಿಶ್ರಣಕ್ಕೆ ಎರಡು ಮೊಟ್ಟೆಯನ್ನು ಒಡೆದು ಹಾಕಿಕೊಳ್ಳಿ. ನಂತರ ಇದಕ್ಕೆ ವೆನಿಲ್ಲಾ ಎಸೆನ್ಸ್ ಹಾಕಿಕೊಂಡು ಮತ್ತೊಮ್ಮೆ ಚನ್ನಾಗಿ ತಿರುವಿಕೊಳ್ಳಿ.

ಇನ್ನೊಂದು ಬೌಲ್‌ನಲ್ಲಿ ಮೈದಾ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಉಪ್ಪು ಮತ್ತು ಬೇಕಿಂಗ್ ಸೋಡಾ ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮೈದಾ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ಮೊಟ್ಟೆ ಮಿಶ್ರಣಕ್ಕೆ ಹಾಕಿಕೊಂಡು ಗಂಟಿಲ್ಲದಂತೆ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಈ ಮಿಶ್ರಣಕ್ಕೆ ಚೋಕೋ ಚಿಪ್ಸ್ ಹಾಕಿಕೊಂಡು ಚಿಪ್ಸ್ ಮಿಶ್ರಣಕ್ಕೆ ಹೊಂದಿಕೊಳ್ಳುವಂತೆ ತಿರುವಿಕೊಳ್ಳಿ.

ಈಗ ಒಂದು ಚಮಚದ ಸಹಾಯದಿಂದ ಸ್ವಲ್ಪ ಸ್ವಲ್ಪವೇ ಈ ಮಿಶ್ರಣವನ್ನು ತೆಗೆದುಕೊಂಡು ಅಂಗೈಯಲ್ಲಿ ಬಿಸ್ಕೆಟ್ ಗಾತ್ರ ಮಾಡಿಕೊಂಡು ಒಂದು ಬೇಕಿಂಗ್ ಟ್ರೇಯಲ್ಲಿ ಹಾಕಿಕೊಳ್ಳಿ. ನಂತರ ಓವನ್ 180 ಡಿಗ್ರಿ ಬಿಸಿಗಿಟ್ಟುಕೊಂಡು ಅದರಲ್ಲಿ 15 ನಿಮಿಷ ಬೇಯಿಸಿಕೊಂಡರೆ ಬಿಸಿ ಬಿಸಿ ಚೋಕೋ ಚಿಪ್ ಕುಕ್ಕೀಸ್ ತಿನ್ನಲು ರೆಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು