ಸಿಹಿ ಪದಾರ್ಥಗಳಲ್ಲಿ ಕೇಸರಿಬಾತ್ ಮಾಡುವುದು ಸರಳ, ಆದರೆ ಮಾಡುವ ವಿಧಾನ ತಪ್ಪಿದರೆ ಅದರ ರುಚಿ ಕಮ್ಮಿಯಾಗುವುದು. ಅತ್ಯಂತ ರುಚಿಕರವಾದ ರವೆ ಕೇಸರಿಬಾತ್ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು :
ಸಣ್ಣರವೆ 2 ಕಪ್ , ನಂದಿನಿ ತುಪ್ಪ
3 ಸ್ಪೂನ್ ಡಾಲ್ಡ ತುಪ್ಪ
1/2 ಕಪ್ ಸನ್ಫ್ಲವರ್ ಆಯಿಲ್
ಸಕ್ಕರೆ 2 ಕಪ್
ಗೋಡಂಬಿ
ಸ್ವಲ್ಪ ಒಣದ್ರಾಕ್ಷಿ
ಸ್ವಲ್ಪ ಕೇಸರಿ ಬಣ್ಣ
ರವೆ ಕೇಸರಿ ಬಾತ್ ತಯಾರಿಸುವ ವಿಧಾನ
ಮೊದಲು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ತುಪ್ಪ ಹಾಕಿ, ತುಪ್ಪ ಕಾದ ಮೇಲೆ ಗೋಡಂಬಿ, ಒಣದ್ರಾಕ್ಷಿಯನ್ನು ಹಾಕಿ ಕೈಯಾಡಿಸಿ . ಗೋಡಂಬಿ ಮತ್ತು ದ್ರಾಕ್ಷಿ ಸ್ವಲ್ಪ ಬಿಸಿಯಾದ ಮೇಲೆ ರವೆಯನ್ನು ಹಾಕಿ, ನಂತರ ಡಾಲ್ಢ ತುಪ್ಪ ಮತ್ತು ಸನ್ಫ್ಲವರ್ ಆಯಿಲ್ನ್ನು (ಸ್ವಲ್ಪ) ಹಾಕಿ ಎಲ್ಲೂ ಗಂಟಾಗದಂತೆ ಕೈಯಾಡಿಸಿ.
ನೀವು ಹಾಕಿದ ಪ್ರಮಾಣವು, ಬಾಣಲಿಯಲ್ಲಿ ರವೆ ಪಾಯಸದ ತರ ಇರಬೇಕು. ರವೆಯನ್ನು ಕಡಿಮೆ ಉರಿಯಲ್ಲಿ ತಿರುವುತ್ತಾ ಇರಬೇಕು. ಇನ್ನೊಂದು ಕಡೆ ಎರಡು ಕಪ್ನಷ್ಟು ನೀರನ್ನು ಬಿಸಿ ಮಾಡಿಕೊಳ್ಳಿ. ರವೆ ಇರುವ ಬಾಣಲಿಗೆ ಕಾದ ಬಿಸಿನೀರನ್ನು ಹಾಕಿ. ರವೆ ಪ್ರಮಾಣ ಮತ್ತು ನೀರಿನ ಪ್ರಮಾಣ ಸಮ ಇರಬೇಕು. ನಂತರ ಸ್ವಲ್ಪ ಕೇಸರಿಯನ್ನು ಹಾಕಿ. ನಂತರ 2 ಲೋಟ ಸಕ್ಕರೆಯನ್ನು ಹಾಕಿ ಮತ್ತೆ ಕೈಯಾಡಿಸಿ. ದಿಢೀರ್ ಕೇಸರಿ ಬಾತ್ ರೆಡಿ.