ಪ್ರತಿನಿತ್ಯ ಬೆಳಗ್ಗಿನ ತಿಂಡಿಗೆ ಏನಪ್ಪಾ ಮಾಡೋದು ಎನ್ನುವ ಚಿಂತೆ ಪ್ರತಿಯೊಂದು ಮನೆಯ ಗೃಹಿಣಿಯರಲ್ಲಿ ಇದ್ದೇ ಇರುತ್ತದೆ. ಅದರಲ್ಲೂ ಮಕ್ಕಳಿರುವ ಮನೆಯವರಿಗೆ ಚಿಂತೆ ಸ್ವಲ್ಪ ಜಾಸ್ತಿಯೇ. ಮಕ್ಕಳು ಒಂದು ದಿನ ತಿಂದಿರುವುದನ್ನು ಮರುದಿನ ತಿನ್ನಲ್ಲ, ಅವರ ಇಷ್ಟ ಪ್ರತಿನಿತ್ಯ ಬದಲಾಗುತ್ತಾ ಇರುವುದು. ಇಂತಹ ಸಮಯದಲ್ಲಿ ಬೆಳಗ್ಗಿನ ತಿಂಡಿಯಲ್ಲಿ ಹಲವಾರು ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ದೋಸೆ ಮಾಡಿದರೂ ತರೇವಾರಿ ದೋಸೆಗಳನ್ನು ಮಾಡಿಕೊಳ್ಳಬೇಕು.
ಅದರಲ್ಲೂ ದೋಸೆ ಎಂದರೆ ದೂರ ಓಡಿ ಹೋಗುವಂತಹ ಮಕ್ಕಳಿಗೆ ಫಿಜ್ಜಾದಂತೆ ಕಾಣಿಸುವ ಮಶ್ರೂಮ್ ಉತ್ತಪ್ಪ ತುಂಬಾ ಆಕರ್ಷಣೀಯವಾಗಿ ಮತ್ತು ರುಚಿಕರವಾಗಿರುವುದು. ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಯಲು ಮುಂದಕ್ಕೆ ಓದಿ…
ಮಶ್ರೂಮ್ ಉತ್ತಪ್ಪ ತಯಾರಿಸುವ ವಿಧಾನ
ಹಿಟ್ಟು ಮಾಡಲು
1. 6 ಕಪ್ ಅಕ್ಕಿ ಮತ್ತು ಒಂದು ಕಪ್ ಉದ್ದಿನ ಬೇಳೆಯೊಂದಿಗೆ ಒಂದು ಚಮಚ ಮೆಂತ್ಯೆ ಹಾಕಿಕೊಂಡು ಸುಮಾರು 3-4 ಗಂಟೆ ಕಾಲ ನೆನೆಸಿಡಿ.
2. ಇದನ್ನು ಪ್ರತ್ಯೇಕವಾಗಿ ರುಬ್ಬಿಕೊಳ್ಳಿ.
3. ರುಬ್ಬಿಕೊಂಡ ಎರಡು ಹಿಟ್ಟನ್ನು ಮಿಶ್ರಣ ಮಾಡಿ. ಇದಕ್ಕೆ ಉಪ್ಪು, ಅಡುಗೆ ಸೋಡಾ ಹಾಕಿ ರಾತ್ರಿಯಿಡಿ ಹುದುಗುವಿಕೆಗೆ ಹಾಗೆ ಬಿಡಿ.
4. ಹಿಟ್ಟು ಇಡ್ಲಿಗೆ ಬಳಸುವಂತೆ ದಪ್ಪವಾಗಿರಲಿ.
ಹಿಟ್ಟಿಗೆ ಹುದುಗು ಬಂದ ಬಳಿಕ ಇದನ್ನು ತವಾಗೆ ಒಯ್ಯಿರಿ ಮತ್ತು ಅದರ ಮೇಲೆ ಕತ್ತರಿಸಿದ ಈರುಳ್ಳಿ, ಟೊಮೆಟೋ ಮತ್ತು ತುರಿದ ಮಶ್ರೂಮ್ ಹಾಕಿ ಕಾಯಿಸಿ. ಎರಡು ಬದಿ ಕಾಯಿಸಿದರೆ ರುಚಿರುಚಿಯಾದ ಮಶ್ರೂಮ್ ಉತ್ತಮ ಸುಲಭವಾಗಿ ತಯಾರಿಸಬಹುದು.