News Karnataka Kannada
Wednesday, May 08 2024
ಅಡುಗೆ ಮನೆ

ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ

Pickle
Photo Credit :

ಒಮ್ಮೆ ಉಪ್ಪಿನಕಾಯಿ ತಯಾರಿಸಿ ವರ್ಷವಿಡೀ ಬಳಸಬಹುದು. ಆದರೆ ಎಲ್ಲರ ಮನೆಯ ಉಪ್ಪಿನಕಾಯಿ ಒಂದೇ ರುಚಿ ಇರುವುದಿಲ್ಲ. ಮಾಡೋ ವಿಧಾನದ ಮೇಲೆ ಉಪ್ಪಿನಕಾಯಿಯ ರುಚಿಯೂ ಭಿನ್ನವಾಗಿರುತ್ತದೆ. ಮಾವಿನ ಕಾಯಿ ಉಪ್ಪಿನಕಾಯಿ ಮಾಡುವ ವಿಧಾನ ಇಲ್ಲಿದೆ,

ಬೇಕಾಗುವ ಸಾಮಗ್ರಿಗಳು 
ಹುಳಿ ಮಾವಿನಕಾಯಿ – 5 ರಿಂದ 6, ಉಪ್ಪು- 1/2 ಕಪ್, ಬ್ಯಾಡಗಿ ಮೆಣಸಿನಕಾಯಿ – 25, ಮೆಂತ್ಯೆ – 3 ಚಮಚ, ಸಾಸುವೆ – 10 ಚಮಚ, ಎಣ್ಣೆ- 1 ಕಪ್ ಇಂಗು – 1/4 ಚಮಚ, ಜೀರಿಗೆ- 1 ಚಮಚ, ಅರಿಶಿನ- 1 ಚಮಚ.

ಮೊದಲಿಗೆ ಮಾವಿನಕಾಯಿಗಳನ್ನು ತೊಳೆದು ಶುದ್ಧವಾದ ಬಟ್ಟೆಯಿಂದ ಒರೆಸಿಕೊಳ್ಳಿ, ಒರೆಸಿದ ನಂತರ ಮಾವಿನಕಾಯಿಗಳನ್ನು ಬೇಕಾದ ಗಾತ್ರಕ್ಕೆ ಕಟ್ ಮಾಡಿಕೊಳ್ಳಿ. ಉಪ್ಪಿನಕಾಯಿ ಶೇಖರಿಸಿಡುವ ಜಾಡಿಯಲ್ಲಿ ತೇವಾಂಶವಿಲ್ಲದಂತೆ ಒರೆಸಿಕೊಳ್ಳಿ.  ಜಾಡಿಗೆ ಮಾವಿನಕಾಯಿ ಹೋಳುಗಳನ್ನು ಹಾಕಿ ಅದರ ಮೇಲೆ ಒಂದು ಲೇಯರ್ ಉಪ್ಪು ಹಾಕಿ. ಹೀಗೆ ಒಂದರ ಮೇಲೊಂದರಂತೆ ಮಾವಿನಕಾಯಿ ಮತ್ತು ಉಪ್ಪನ್ನು ಹಾಕಿ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿ ಎರಡರಿಂದ ಮೂರು ದಿನಗಳವರೆಗೆ ಇಡಬೇಕು. ಮೂರನೇ ದಿನಕ್ಕೆ ಮಾವಿನಕಾಯಿ ಉಪ್ಪಿನೊಂದಿಗೆ ಚೆನ್ನಾಗಿ ಬೆರೆತು ನೀರಿನಂಶ ಕೆಳಗೆ ಶೇಖರಣೆಯಾಗಿರುತ್ತದೆ.  ನಂತರ ಮಾವಿನಕಾಯಿ ಹೋಳುಗಳನ್ನು ಜಾಡಿಯಿಂದ ತೆಗೆದು ಒಂದು ತಟ್ಟೆಯಲ್ಲಿ ಹಾಕಿ. ಜಾಡಿಯಲ್ಲಿರುವ ಉಪ್ಪಿನ ನೀರನ್ನು ತೆಗೆದು ಅದಕ್ಕೆ ಮತ್ತೊಂದು ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ. ನೀರು ಅರ್ಧದಷ್ಟು ಇಂಗಿದ ನಂತರ ಆರಲು ಬಿಡಿ.

ಒಂದು ಬಾಣಲೆಯಲ್ಲಿ ಸಾಸುವೆ, ಮೆಂತ್ಯೆ ಮತ್ತು ಜೀರಿಗೆಯನ್ನು ಒಂದರ ನಂತರ ಒಂದರಂತೆ ಕೆಂಪಾಗುವ ತನಕ ಹುರಿದು ತೆಗೆಯಿರಿ. ನಂತರ 4 ಚಮಚ ಎಣ್ಣೆ ಹಾಕಿ ಬ್ಯಾಡಗಿ ಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ಕೊನೆಯಲ್ಲಿ ಸ್ವಲ್ಪ ಇಂಗು ಹಾಕಿ ಬಿಸಿ ಮಾಡಿ ತೆಗೆದು ಎಲ್ಲಾ ಮಸಾಲೆ ಪದಾರ್ಥಗಳು ತಣ್ಣಗಾಗಲು ಬಿಡಿ. ನಂತರ ಮಿಕ್ಸಿ ಜಾರ್‍ಗೆ ಹುರಿದಿಟ್ಟುಕೊಂಡ ಪದಾರ್ಥಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ, ಸ್ವಲ್ಪ ಸಾಸುವೆ ಮತ್ತು ಪುಡಿ ಮಾಡಿದ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ. ನಂತರ ಮಾವಿನಕಾಯಿ ಹೋಳು ಮತ್ತು ಕುದಿಸಿದ ನೀರನ್ನು ಹಾಕಿ ತಿರುವಿ. ನೀರು ಇಂಗಿದ ನಂತರ ಒಲೆಯಿಂದ ಇಳಿಸಿ ತಣ್ಣಗಾದ ನಂತರ ಒಂದು ಡಬ್ಬದಲ್ಲಿ ಹಾಕಿ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿ ಎರಡು ದಿನಗಳ ನಂತರ ಬಳಸಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು