ಮನೆಯಲ್ಲೇ ಮಾಡಿ ಆಲೂಪರೋಟ

ಆಲೂಗೆಡ್ಡೆ ಎಂದರೆ ಎಲ್ಲರಿಗೆ ಅಚ್ಚುಮೆಚ್ಚು. ಅದರಲ್ಲೂ ಚಿಕ್ಕಮಕ್ಕಳಿಗಂತೂ ತುಂಬಾ ಇಷ್ಟ. ಆಲೂಗೆಡ್ಡೆಯಲ್ಲಿ ಬಗೆ ಬಗೆಯ ಮಾಡಿ ಬಡಿಸಬಹುದು. ಅಂತಹ ರುಚಿಕರವಾದ ಪದಾರ್ಥಗಳಲ್ಲಿ ಆಲೂಪರೋಟ ಕೂಡ ಒಂದು. ಇದು ಮಾಡಲು ತುಂಬಾ ಸರಳವಾಗಿದ್ದು, ತಿನ್ನಲು ರುಚಿಕರವಾಗಿರುತ್ತದೆ.

ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು- 2 ಕಪ್

ಆಲೂಗೆಡ್ಡೆ- ಅರ್ಧ ಕೆಜಿ

ಕೊತ್ತಂಬರಿಸೊಪ್ಪು- ಒಂದು ಕಂತೆ

ಹಸಿ ಮೆಣಸಿನಕಾಯಿ- 8

ಕೊತ್ತಂಬರಿ- ಮೂರು ಚಮಚ

ಜೀರಿಗೆ- ಒಂದು ಚಮಚ

ಇಂಗು, ಉಪ್ಪು(ರುಚಿಗೆ ತಕ್ಕಷ್ಟು)

ತಯಾರು ಮಾಡುವ ವಿಧಾನ ಹೀಗಿದೆ: ಆಲೂಪರೋಟ ಮಾಡಲು ಹೊರಡುವ ಮುನ್ನ ಅರ್ಧ ಗಂಟೆಗೂ ಮೊದಲು ಗೋಧಿಹಿಟ್ಟನ್ನು ಚಪಾತಿ ಹಿಟ್ಟಿನಂತೆ ಕಲೆಸಿಟ್ಟುಕೊಳ್ಳಬೇಕು. ಬಳಿಕ ಆಲೂಗೆಡ್ಡೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು.

ಇನ್ನೊಂದೆಡೆ ಮಸಾಲೆ ಪದಾರ್ಥಗಳನ್ನೆಲ್ಲ ಅಂದರೆ ಇಂಗು, ಜೀರಿಗೆ, ಕೊತ್ತಂಬರಿ ಬೀಜ, ಮೆಣಸಿಕಾಯಿ, ಕೊತ್ತಂಬರಿಸೊಪ್ಪು ಮೊದಲಾದವುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸಿ ಮಾಡಿ ಅದನ್ನು ಬೇಯಿಸಿದ ಆಲೂಗೆಡ್ಡೆಯೊಂದಿಗೆ ಬೆರೆಸಬೇಕು ಈ ವೇಳೆ ರುಚಿಗೆ ತಕ್ಕಂತೆ ಉಪ್ಪನ್ನು ಹಾಕಿ ಬಳಿಕ ಚೆನ್ನಾಗಿ ಕಲೆಸಿಟ್ಟುಕೊಳ್ಳಬೇಕು.

ಮತ್ತೊಂದೆಡೆ ಕಲೆಸಿಟ್ಟ ಗೋಧಿ ಹಿಟ್ಟನ್ನು ತೆಗೆದುಕೊಂಡು ಮೊದಲಿಗೆ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಪೂರಿ ಗಾತ್ರದಲ್ಲಿ ಲಟ್ಟಿಸಿಕೊಂಡು ಮಧ್ಯದಲ್ಲಿ ಬೇಯಿಸಿದ ಆಲೂಗೆಡ್ಡೆಯನ್ನೊಳಗೊಂಡ ಮಿಶ್ರಣವನ್ನು ಇಟ್ಟು ಅದರ ಸುತ್ತ ಬರುವಂತೆ ತಟ್ಟಿ ಅದರ ಮೇಲೆ ಮತ್ತೊಂದು ಪದರ ಬರುವಂತೆ ಹಾಕಿ ಸುತ್ತಲೂ ಮಡಚಿ ಬಳಿಕ ಸ್ವಲ್ಪ ಗೋಧಿ ಹಿಟ್ಟನ್ನು ಉದುರಿಸಿಕೊಂಡು ಅಗಲವಾಗಿ ಲಟ್ಟಿಸಬೇಕು. ಅದಾದ ಬಳಿಕ ತಾವಾದಲ್ಲಿ ಎಣ್ಣೆ ಹಾಕಿಕೊಂಡು ಚೆನ್ನಾಗಿ ಬೇಯಿಸಿದರೆ ಸವಿಯಲು ರುಚಿಯಾದ ಆಲೂಪರೋಟ ತಯಾರಾಗುತ್ತದೆ

Desk

Recent Posts

ಭೂದೇವಿ ಸಮೇತ ಶ್ರೀಲಕ್ಷ್ಮಿವರಾಹಸ್ವಾಮಿಗೆ ಅಭಿಷೇಕ

ವರಹಾ ಜಯಂತಿಯ ಅಂಗವಾಗಿ ಕೃ?ರಾಜಪೇಟೆ ತಾಲ್ಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮಿ ಭೂವರಾಹಸ್ವಾಮಿಯ ಶಿಲಾಮೂರ್ತಿಗೆ ವಿಶೇ? ಅಭಿ?ಕ ನಡೆಯಿತಲ್ಲದೆ, ಸ್ವಾಮಿಯ…

7 hours ago

ನನ್ನ ವಿರುದ್ಧ ದೇವರಾಜೇಗೌಡ ಮಾಡಿರುವ ಆಪಾದನೆಗಳು ಆಧಾರ ರಹಿತ: ಡಿಕೆ ಶಿವಕುಮಾರ್

ಹಾಸನ ವಿಡಿಯೋ ಪೆನ್​ಡ್ರೈವ್​ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿ ಆಡಿಯೋವೊಂದನ್ನು…

7 hours ago

ರಾಜ್ಯದ ಹಲವೆಡೆ ಮುಂದಿನ 5 ದಿನಗಳ ಕಾಲ‌ ಗುಡುಗು ಸಹಿತ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ಇಂದಿನಿಂದ ಮೇ 11ರವರೆಗೆ ವರುಣ ಆಗಮನ ಆಗುವ ಮುನ್ಸೂಚನೆ. ಹಾಗೂ ಮುಂದಿನ 5 ದಿನಗಳ ಕಾಲ‌ ಗುಡುಗು…

7 hours ago

ಬೀದರ್ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರು ಮಾವಿನ ಹಣ್ಣಿನ ದರ್ಬಾರ್‌

ಯುಗಾದಿ ಮುಗಿಯುತ್ತಿದ್ದಂತೆ ಎಲ್ಲೆಡೆ ಮಾವಿನ ಹಣ್ಣುಗಳ ದರ್ಬಾರ ಕಂಡುಬರುತ್ತಿದೆದೆ. ಮಾರುಕಟ್ಟೆಗೆ ಮಾವಿನಕಾಯಿ ಹೆಚ್ಚಾಗಿ ಬರುತ್ತಿದೆ. ಸಾಲಾಗಿ ಜೋಡಿಸಿಟ್ಟ ಮಾವಿನ ಹಣ್ಣು…

7 hours ago

ಬಾಲಕಿ ಮೇಲೆ 2 ರಾಟ್‌ವೀಲರ್ ನಾಯಿಗಳಿಂದ ದಾಳಿ: ಮಾಲೀಕ ಅರೆಸ್ಟ್

ಎರಡು ರಾಟ್‌ವೀಲರ್ ನಾಯಿಗಳು ಐದು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದ ಸಾರ್ವಜನಿಕ…

8 hours ago

ಬೀದರ್: ಬಿಸಿಲಿನ ಝಳಕ್ಕೆ ಚುನಾವಣೆ ಸಿಬ್ಬಂದಿ ತತ್ತರ

ಮಂಗಳವಾರ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದಿಂದಲೇ ಕರ್ತವ್ಯ ನಿರತ ಸಿಬ್ಬಂದಿ ಮತಗಟ್ಟೆಗೆ…

8 hours ago