ಬೀಟ್ ರೂಟ್ ನಿಂದ ಕೇವಲ ಸಾಂಬಾರ್, ಪಲ್ಯ ಮಾತ್ರವಲ್ಲದೆ ಹಲ್ವಾವನ್ನೂ ತಯಾರಿಸಬಹುದು. ಬನ್ನಿ ನಾವು ಇವತ್ತು ಸ್ಪೇಷಲ್ ಸಿಹಿತಿಂಡಿ ಬೀಟ್ ರೂಟ್ ಹಲ್ವಾ ತಯಾರಿಸಿ ಸವಿಯೋಣ.
ಬೇಕಾಗುವ ಸಾಮಾಗ್ರಿಗಳು :
ಬೀಟ್ರೂಟ್ 3
ಹಾಲು 2 ಕಪ್
ಸಕ್ಕರೆ 1/2 ಕಪ್
ಏಲಕ್ಕಿ ಪುಡಿ 1 ಚಮಚ
ತುಪ್ಪ 3 ಚಮಚ
ಗೋಡಂಬಿ / ದ್ರಾಕ್ಷಿ ಸ್ವಲ್ಪ
ಬಾದಾಮಿ 5-6
ಖೋವಾ 3 ಚಮಚ
ತಯಾರಿಸುವ ವಿಧಾನ
ಬೀಟ್ರೂಟನ್ನು ಚೆನ್ನಾಗಿ ತೊಳೆದು, ತುರಿದು ಇಟ್ಟುಕೊಳ್ಳಿ. ಒಂದು ಪ್ಯಾನ್ನಲ್ಲಿ ತುಪ್ಪ ಹಾಕಿ ಕಾಯಿಸಿ. ಅದು ಬಿಸಿಯಾದಾಗ ಅದಕ್ಕೆ ಗೋಡಂಬಿ, ಬಾದಾಮಿ ಮತ್ತು ದ್ರಾಕ್ಷಿ ಹಾಕಿ, ಸ್ವಲ್ಪ ಹೊತ್ತು ಹುರಿಯಿರಿ. ನಂತರ ಅವುಗಳನ್ನು ತೆಗೆದು ಪಕ್ಕದಲ್ಲಿಡಿ. ಈಗ ತುರಿದ ಬೀಟ್ರೂಟ್ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಹುರಿಯಿರಿ. ನಂತರ ಅದಕ್ಕೆ ಹಾಲು ಮತ್ತು ಖೋವಾ ಹಾಕಿ. ಮತ್ತೆ ಫ್ರೈ ಮಾಡಿ. ಸ್ವಲ್ಪ ಫ್ರೈ ಆದ ನಂತರ ಅದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಾಲಿನ ಜೊತೆ ಎಲ್ಲವೂ ಬೆರೆತು ಚೆನ್ನಾಗಿ ಮಿಕ್ಸ್ ಆಗಿ ಗಟ್ಟಿಯಾಗುವವರೆಗೆ ಬೇಯುತ್ತಿರಲಿ. ಅದು ಅಂಟು ಬಿಡುತ್ತಾ ಬಂದ ನಂತರ ಸ್ಟೌನಿಂದ ಇಳಿಸಿ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಕಿ ಅಲಂಕರಿಸಿ. ಈಗ ಟೇಸ್ಟಿಯಾದ ಬೀಟ್ರೂಟ್ ಹಲ್ವ ಸವಿಯಲು ರೆಡಿ.