ಈ ರೆಸಿಪಿಯನ್ನು ಮಾಡಲು ತುಂಬಾ ಸುಲಭವಾಗಿದ್ದು ಎಲ್ಲ ವಯಸ್ಸಿನವರಿಗೂ ಇದರ ರುಚಿ ಇಷ್ಟವಾಗುತ್ತದೆ. ಈ ರೆಸಿಪಿಯನ್ನು ಬಿಸಿ ಬಿಸಿಯಾಗಿ ತಿನ್ನುವುದರಿಂದ ಅದರ ರುಚಿ ಇನ್ನಷ್ಟು ಉತ್ತಮವಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು
• 2 ಬಟಾಟೆ(ಸಿಪ್ಪೆ ಸುಳಿದು, ಕತ್ತರಿಸಿ)
• 3-4 ಟೀ ಚಮಚ ಕಾರ್ನ್ಫ್ಲೋರ್ ಅಥವಾ ಮೈದ
• ರುಚಿಗೆ ತಕ್ಕಷ್ಟು ಉಪ್ಪು
• 1ಟೀ ಚಮಚ ಮೆಣಸಿನ ಪುಡಿ
• ಕರಿಯಲು ಬೇಕಾದಷ್ಟು ಎಣ್ಣೆ
ಹುರಿದು ಕೊಳ್ಳಲು ಬೇಕಾಗಿರುವ ಸಾಮಾಗ್ರಿಗಳು:
• 1 ಟೀ ಚಮಚ ಎಣ್ಣೆ
• 2 ಈರುಳ್ಳಿ (ಕತ್ತರಿಸಿದ್ದು)
• 1 ಟೀ ಚಮಚ ಬೆಳ್ಳುಳ್ಳಿ ಪೇಸ್ಟ್
• 1 ಕ್ಯಾಪ್ಸಿಕಂ(ಕತ್ತರಿಸಿದ್ದು)
• 2 ಟೀ ಚಮಚ ಜೇನು ತುಪ್ಪ
• ರುಚಿಗೆ ತಕ್ಕಷ್ಟು ಉಪ್ಪು
• 1/4 ಟೀ ಚಮಚ ಸೋಯಾ ಸಾಸ್
• 3 ಟೀ ಚಮಚ ಬಿಳಿ ಎಳ್ಳು
• 2 ಟೀ ಚಮಚ ಚಿಲ್ಲಿ ಸಾಸ್
ಹನಿ ಚಿಲ್ಲಿ ಪೋಟಾಟೋ ಮಾಡುವ ವಿಧಾನ: ಒಂದು ಬೌಲ್ ನಲ್ಲಿ ಕಾರ್ನ್ಫ್ಲೋರ್ ಅಥವಾ (ಮೈದಾ), ಉಪ್ಪು, ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಕತ್ತರಿಸಿದ ಬಟಾಟೆಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ನಂತರ ಒಂದು ಬಣಾಲೆಯಲ್ಲಿ ಎಣ್ಣೆಯನ್ನು ಕಾಯಿಸಿ ಬಟಾಟೆಯನ್ನು ಗೋಲ್ಡಾನ್ ಕಲರ್ ಬರುವವರೆಗೆ ಹುರಿಯಿರಿ.
ಕರಿಯಲು ಬೇಕಾಗುವ ಸಾಮಾಗ್ರಿಗಳು: ಇನ್ನೊಂದು ಬಣಾಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ನೀರುಳ್ಳಿ ಹಾಕಿ 1 ನಿಮಿಷ ಹುರಿಯಿರಿ. ಅದಕ್ಕೆ ಕ್ಯಾಪ್ಸಿಕಂ, ಜೇನು ತುಪ್ಪ, ಉಪ್ಪು, ಸೋಯಾ ಸಾಸ್, ಚಿಲ್ಲಿ ಸಾಸ್ ಹಾಕಿ ಎರಡು ನಿಮಿಷ ಹುರಿಯಿರಿ. ನಂತರ ಅದಕ್ಕೆ ಬೇಯಿಸಿದ ಬಟಾಟೆ ಹಾಗೂ ಎಳ್ಳನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಬಿಸಿ ಬಿಸಿಯಾಗಿ ತಿನ್ನಿ.