News Karnataka Kannada
Monday, April 29 2024
ಅಡುಗೆ ಮನೆ

ತಿನಿಸು ಪ್ರಿಯರ ನೆಚ್ಚಿನ ತಿಂಡಿ ಆಲೂಗೆಡ್ಡೆ ಬೋಂಡ

Untitled 1
Photo Credit :

ಆಲೂಗೆಡ್ಡೆಯಲ್ಲಿ ಮಾಡುವ ಬಹಳಷ್ಟು ರುಚಿಕರ ತಿಂಡಿಗಳಲ್ಲಿ ಆಲೂಗೆಡ್ಡೆ ಬೋಂಡ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಆಲೂ ಬೋಂಡಾ ತಿನ್ನದ ತಿನಿಸು ಪ್ರಿಯರೇ ಇಲ್ಲ ಎನ್ನಬಹುದು. ಈ ಆಲೂ ಬೋಂಡ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು :

• ಆಲೂಗಡ್ಡೆ – 1 ಕೆಜಿ

• ಹಸಿಮೆಣಸಿನಕಾಯಿ – 4

• ಕರಿಬೇವು – 1 ಕಂತೆ

• ಒಣಮೆಣಸು – 2

• ಸಾಸಿವೆ – 1 ಚಮಚ

• ತುಪ್ಪ – 2 ಚಮಚ

• ಕಡ್ಲೇಹಿಟ್ಟು – 180 ಗ್ರಾಂ

• ಮೆಣಸಿನಕಾಯಿ ಪುಡಿ – 1 ಚಮಚ

• ಶುಂಠಿ ಸ್ವಲ್ಪ

• ಹಿಂಗು ಸ್ವಲ್ಪ

• ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಬೇಯಿಸಿ, ಸಿಪ್ಪೆ ತೆಗೆದು ಪುಡಿಮಾಡಿಕೊಳ್ಳಬೇಕು, ಆ ಮಿಶ್ರಣಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸಿನ ಕಾಯಿ, ಹಸಿಶುಂಠಿ, ಕರಿಬೇವು ಸಣ್ಣಗೆ ಹಚ್ಚಿ ಹಾಕಿ. ನಿಂಬೆಹಣ್ಣಿನ ರಸ, ಇಂಗು ಉಪ್ಪನ್ನು ಸೇರಿಸಿ ಜೊತೆಗೆ ಒಂದು ಸಾಸಿವೆ ಒಗ್ಗರಣೆ ಕೊಟ್ಟು ಅದು ಆರಿದ ಮೇಲೆ ಚೆನ್ನಾಗಿ ಕಲಸಿ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. ಕಡಲೆ ಹಿಟ್ಟಿಗೆ ಸ್ವಲ್ಪ ಉಪ್ಪು, ಮೆಣಸಿನಕಾಯಿ ಹುಡಿ ಹಾಕಿ, ನೀರನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ, ಮಾಡಿಟ್ಟ ಆಲೂಗಡ್ಡೆ ಉಂಡೆಗಳನ್ನು ಕಡಲೆ ಹಿಟ್ಟಿನ ಮಿಶ್ರಣಕ್ಕೆ ಮುಳುಗಿಸಿ ಕಾದ ಎಣ್ಣೆಯಲ್ಲಿ ಕರಿದರೆ ಬಿಸಿ ಬಿಸಿ ಆಲೂಗಡ್ಡೆ ಬೋಂಡ ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
25278

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು