News Karnataka Kannada
Sunday, May 05 2024
ಅಡುಗೆ ಮನೆ

ಉಪ್ಪಿನಕಾಯಿಯ ಜೊತೆ ಸವಿಯಿರಿ ರುಚಿಯಾದ ‘ಮೊಸರನ್ನ’

Mosaranna
Photo Credit : News Kannada
ಕರ್ನಾಟಕದಲ್ಲಿ ‘ಕಂಫರ್ಟ್ ಫುಡ್’ ಅಥವಾ ಅತಿ ಹೆಚ್ಚು ಜನರು ಇಷ್ಟ ಪಡುವ ಆಹಾರ, ಅಷ್ಟೇ ಸರಳವಾದ, ರುಚಿಯಾದ ಆಹಾರವೆಂದರೆ ‘ಮೊಸರನ್ನ’ ಎಂದೇ ಹೇಳಬಹುದು. ಕೆಲವರಿಗಂತೂ ಊಟದ ಕೊನೆಯಲ್ಲಿ ಸ್ವಲ್ಪ ತಂಪಾದ ಮೊಸರನ್ನ ತಿಂದೇಳುವುದೇ ಒಂದು ಸಂಪ್ರದಾಯ. ಮೊಸರನ್ನ ಮಾಡಲು ತುಂಬಾ ವಿಧಾನಗಳಿವೆ. ನಾನಿಲ್ಲಿ ತುಂಬಾ ಸರಳವಾಗಿ ಅಷ್ಟೇ ರುಚಿಯಾಗಿ ಮೊಸರನ್ನ ಮಾಡುವುದನ್ನು ತಿಳಿಸುತ್ತಿದ್ದೇನೆ.

ಬೇಕಾಗುವ ಸಾಮಾಗ್ರಿಗಳು :

ಅಕ್ಕಿ – ೧ ಕಪ್, ತೊಳೆದದ್ದು
ನೀರು – ೩ ಕಪ್
ಮೊಸರು – ೨ ಕಪ್
ಹಸಿ ಮೆಣಸಿನಕಾಯಿ – ೧, ಸಣ್ಣಗೆ ಹೆಚ್ಚಿದ್ದು
ಶುಂಠಿ – ೧ ಚಮಚ, ಸಣ್ಣಗೆ ಹೆಚ್ಚಿದ್ದು
ಹಾಲು – ೨ ದೊಡ್ಡ ಚಮಚ
ಉಪ್ಪು – ೧ ಚಮಚ ಅಥವಾ ರುಚಿಗೆ ತಕ್ಕಷ್ಟು
ಸಾಸಿವೆ – ೧ ಚಮಚ
ಉದ್ದಿನ ಬೇಳೆ – ೧ ಚಮಚ
ಕರಿಬೇವು – ೧೦ ರಿಂದ ೧೨
ಒಣ ಮೆಣಸಿನಕಾಯಿ – ೧
ಗೋಡಂಬಿ – ೧೦, ತುಂಡುಮಾಡಿದ್ದು
ಕೊತ್ತಂಬರಿ ಸೊಪ್ಪು – ೧ ದೊಡ್ಡ ಚಮಚ, ಹೆಚ್ಚಿದ್ದು
ದಾಳಿಂಬೆ ಬೀಜಗಳು – ೨ ದೊಡ್ಡ ಚಮಚ
ತುಪ್ಪ – ೧ ದೊಡ್ಡ ಚಮಚ

ಮಾಡುವ ವಿಧಾನ :

ಪ್ರೆಶರ್ ಕುಕ್ಕರ್ ಗೆ ೧ ಕಪ್ ತೊಳೆದ ಅಕ್ಕಿಯನ್ನು ಹಾಕಿ. ೩ ಕಪ್ ನೀರನ್ನು ಹಾಕಿ.ಮೊಸರನ್ನಕ್ಕೆ ಅನ್ನಮಾಡುವಾಗ ಅಕ್ಕಿಯ ಮೂರು ಪಟ್ಟು ನೀರನ್ನು ಹಾಕಬೇಕು.ಇದರಿಂದ ಅನ್ನವು ಮೆತ್ತಗಾಗಿ ಬರುತ್ತದೆ. ದೊಡ್ಡ ಉರಿಯಲ್ಲಿ ೩ ವಿಷಲ್ ಬರುವವರೆಗೆ ಕುಕ್ಕರ್ನಲ್ಲಿ ಬೇಯಿಸಿ. ಅನ್ನ ಬೆಂದ ಮೇಲೆ ಸ್ವಲ್ಪ ಮ್ಯಾಶ್ ಮಾಡಿಕೊಳ್ಳಿ. ಮ್ಯಾಶ್ ಮಾಡಿದ ಅನ್ನವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಒಂದು ಪಾತ್ರೆಯಲ್ಲಿ ೨ ಕಪ್ ಮೊಸರನ್ನು ಹಾಕಿ. ಮೊಸರನ್ನು ಅನ್ನಕ್ಕೆ ಹಾಕಿ ಚೆನ್ನಾಗಿ ಕಲಸಿ. ೧ ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ, ೧ ಚಮಚ ಸಣ್ಣಗೆ ಹೆಚ್ಚಿದ ಶುಂಠಿ, ೨ ದೊಡ್ಡ ಚಮಚ ಹಾಲನ್ನು ಹಾಗೂ ೧ ಚಮಚ ಉಪ್ಪನ್ನು ಹಾಕಿ, ಚೆನ್ನಾಗಿ ಕಲಸಿ ಹಾಗೂ ಬದಿಗಿರಿಸಿ.

ಒಗ್ಗರಣೆ ಸೌಟಿನಲ್ಲಿ ೧ ದೊಡ್ಡ ಚಮಚ ತುಪ್ಪವನ್ನು ಬಿಸಿ ಮಾಡಿ.೧ ಚಮಚ ಸಾಸಿವೆಯನ್ನು ಹಾಕಿ.ಸಾಸಿವೆ ಸಿಡಿದ ಮೇಲೆ ೧ ಚಮಚ ಉದ್ದಿನ ಬೇಳೆ, ೧೦ ರಿಂದ ೧೨ ಕರಿಬೇವಿನ ಎಲೆ, ೧ ಒಣ ಮೆಣಸಿನಕಾಯಿ ತುಂಡುಮಾಡಿದ್ದು ಹಾಗೂ ೧೦ ತುಂಡು ಮಾಡಿದ ಗೋಡಂಬಿಯನ್ನು ಹಾಕಿ.ಚೆನ್ನಾಗಿ ಹುರಿಯಿರಿ ಹಾಗೂ ಮೊಸರನ್ನಕ್ಕೆ ಹಾಕಿ. ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೊಸರನ್ನಕ್ಕೆ ಹಾಕಿ ಚೆನ್ನಾಗಿ ಕಲಸಿದರೆ ಮೊಸರನ್ನ ಬಡಿಸಲು ಸಿದ್ಧ. ಬಡಿಸಿದ ಮೇಲೆ ಮೇಲ್ಗಡೆ ಸ್ವಲ್ಪ ದಾಳಿಂಬೆ ಕಾಳನ್ನು ಹಾಕಿದರೆ ರುಚಿ ಇನ್ನಷ್ಟು ಹೆಚ್ಚು . ಉಪ್ಪಿನಕಾಯಿಯ ಜೊತೆ ಅಥವಾ ಹಪ್ಪಳದ ಜೊತೆ ಸವಿಯಿರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು