ಟೊಮ್ಯಾಟೋ ಬಾತ್ ಮಾಡಲು ಇಲ್ಲಿದೆ ಸುಲಭ ವಿಧಾನ

ಟೊಮ್ಯಾಟೋ ಬಾತ್ ಬಹಳ ರುಚಿಕರ ಮತ್ತು ಆರೋಗ್ಯಕರ ಅಡುಗೆಯಾಗಿದ್ದು, ಇದನ್ನು ಬೆಳಗ್ಗಿನ ಉಪಹಾರ ಅಥವಾ ಊಟದ ಸಮಯದಲ್ಲಿ ಬಡಿಸಬಹುದು. ಈ ಟೊಮ್ಯಾಟೋ ಬಾತ್ ಸಾಧಾರಣವಾಗಿ ಬೆಂಗಳೂರು-ಮೈಸೂರು ಪ್ರದೇಶದಲ್ಲಿ ಚಾಲ್ತಿಯಲ್ಲಿದೆ.

ಬೇಕಾಗುವ ಸಾಮಾಗ್ರಿಗಳು :
ತುಪ್ಪ, ಪುಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನೆನೆಸಿದ ಒಣ ಬಟಾಣಿ, ಗೋಡಂಬಿ,ಸೀಳಿದ ಹಸಿ ಮೆಣಸಿನ ಕಾಯಿ ಟೊಮೇಟೊ, ಅರಶಿನ ಪುಡಿ, ಉಪ್ಪು, ಅಚ್ಚ ಖಾರದ ಪುಡಿ, ಹೆಚ್ಚಿದ ಪುದಿನ ಎಲೆ, ಹೆಚ್ಚಿದ ಕೊತ್ತಂಬರಿ ಸೊಪ್ಪು, ನೆನೆಸಿದ ಬಾಸಮತಿ ಅಕ್ಕಿ, ನೀರು

ಮಾಡುವ ವಿಧಾನ :
೧ ಕಪ್ ಬಾಸ್ಮತಿ ಅಕ್ಕಿಯನ್ನು ನೀರಿನಲ್ಲಿ ೩೦ ನಿಮಿಷ ನೆನೆಸಿಡಿ. ಪ್ರೆಶರ್ ಕುಕ್ಕರ್‌ನಲ್ಲಿ ೨ ಚಮಚ ತುಪ್ಪವನ್ನು ಬಿಸಿ ಮಾಡಿ. ಬಿಸಿ ತುಪ್ಪಕ್ಕೆ ೨ ಪುಲಾವ್ ಎಲೆಗಳು, ೨ ಸಣ್ಣ ಚಕ್ಕೆ  ತುಂಡುಗಳು, ೨ ಏಲಕ್ಕಿ ಮತ್ತು ೪ ಲವಂಗ ಸೇರಿಸಿ. ಅವುಗಳನ್ನು ಸ್ವಲ್ಪ ಹೊತ್ತು ಹುರಿಯಿರಿ ಹಾಗೂ ೧ ತೆಳ್ಳಗೆಹೆಚ್ಚಿದ ಈರುಳ್ಳಿಯನ್ನು ಹಾಕಿ.

ನಂತರ ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈರುಳ್ಳಿಯನ್ನು ಚೆನ್ನಾಗಿ ಬಾಡಿಸಿ ಹುರಿಯಿರಿ. ಅರ್ಧ ಕಪ್ ಹಸಿ  ಬಟಾಣಿ ಸೇರಿಸಿ .ನೀವು ಒಣ ಬಟಾಣಿಗಳನ್ನು ರಾತ್ರಿಯಿಡೀ ನೆನೆಸಿ ತಾಜಾ ಬಟಾಣಿ ಬದಲಿಗೆಬಳಸಬಹುದು. ೧ ಚಮಚ ಗೋಡಂಬಿ ಬೀಜಗಳನ್ನು ಸೇರಿಸಿ.ಮಧ್ಯಮ ಉರಿಯಲ್ಲಿ ಸುಮಾರು ೩ ರಿಂದ ೪ ನಿಮಿಷಗಳ ಕಾಲಬಟಾಣಿಯನ್ನು ಹುರಿಯಿರಿ.

ನಂತರ ೨ ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ (ಸೀಳಿದ್ದು ) .ನಂತರ ೨ ದೊಡ್ಡ ಟೊಮೆಟೊಗಳನ್ನು ಸಣ್ಣಗೆಕತ್ತರಿಸಿ ಚೆನ್ನಾಗಿ ಹುರಿಯಿರಿ.ಒಂದು ಚಿಟಿಕೆ ಅರಿಶಿನ ಪುಡಿಯನ್ನು ಕೂಡ ಸೇರಿಸಬಹುದು. ಇದಲ್ಲದೆ ಮೆಣಸಿನ ಪುಡಿ, ಉಪ್ಪು, ೫ ಕತ್ತರಿಸಿದ ಪುದಿನ ಎಲೆಗಳು, ೩ ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿಸೊಪ್ಪು ಸೇರಿಸಿ ಚೆನ್ನಾಗಿ ಕಲಸಿ.

೨ ಕಪ್ ನೀರು ಸೇರಿಸಿ ಕುದಿಸಿ. ನೀರು ಕುದಿಯಲು ಪ್ರಾರಂಭಿಸಿದ ನಂತರ, ನೆನೆಸಿದ ಅಕ್ಕಿ ಸೇರಿಸಿ ಮತ್ತೊಮ್ಮೆ  ಕಲಕಿ. ಒಂದೆರಡು ವಿಷಲ್ ಬರುವವರೆಗೆ ದೊಡ್ಡ ಉರಿಯಲ್ಲಿ ಬೇಯಿಸಿ ಸೇವಿಸಿ.

Gayathri SG

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

2 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

2 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

2 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

2 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

3 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

3 hours ago