ಗಸಗಸೆ  ಪಾಯಸ ಸವಿಯಲು ಇಲ್ಲಿದೆ ಸುಲಭ ವಿಧಾನ

ಸಿಹಿ ಪ್ರಿಯರಿಗೆ  ಪಾಯಸವೆಂದರೆ ತುಂಬಾ ಇಷ್ಟ. ಸಿಹಿ ತಿನ್ನಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಗಸಗಸೆ  ಪಾಯಸ ಮಾಡಿಕೊಂಡು ಸವಿಯಿರಿ.ಸಾಮಾನ್ಯವಾಗಿ ಹಬ್ಬಕ್ಕೆ ಪಾಯಸ ಮಾಡುವುದು ಸಹಜ. ಆದರೆ ಸ್ಪೆಷಲ್ಲಾಗಿ ಈ ದಿನ ಗಸಗಸೆ ಪಾಯಸ ಮಾಡಿ ನೋಡಿ. ಈ ಪಾಯಸವನ್ನು ವಾರದಲ್ಲಿ ಎರಡು ಮೂರು ಬಾರಿ ತಿಂದರೆ ನಿದ್ದೆ ಸಮಸ್ಯೆ ಕೂಡ ಪರಿಹಾರವಾಗುತ್ತದೆ.

ಬೇಕಾಗುವ ಸಾಮಾಗ್ರಿಗಳು :

ಹಾಲು – ಮುಕ್ಕಾಲು ಲೋಟ, ಬೆಲ್ಲ – ಅರ್ಧ ಕಪ್ ಕುಟ್ಟಿದ್ದು, ತೆಂಗಿನಕಾಯಿ – ಹೆಚ್ಚಿದ್ದು ಸ್ವಲ್ಪ, ಗೋಡಂಬಿ ದ್ರಾಕ್ಷಿ – ಹೆಚ್ಚಿದ್ದು ಸ್ವಲ್ಪ, ಗಸಗಸೆ – 3 ಟೇಬಲ್ ಚಮಚ, ಒಣಗಿದ ಕೊಬ್ಬರಿ – ಹೆಚ್ಚಿದ್ದು ಸ್ವಲ್ಪ, ಅಕ್ಕಿ – ಒಂದು ಚಮಚ, ಗೋಡಂಬಿ, ಬಾದಾಮಿ ನೆನೆಸಿದ್ದು, ಏಲಕ್ಕಿ – 2, ತುಪ್ಪ – 3 ಟೇಬಲ್ ಚಮಚ.

ಫ್ರೈ ಪ್ಯಾನ್ ನಲ್ಲಿ ಅಕ್ಕಿಯನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ನಂತರ ಸ್ವಲ್ಪ ಗಸಗಸೆಯನ್ನು ಹಾಕಿ ಎರಡು ನಿಮಿಷಗಳ ಕಾಲ ಫ್ರೈ ಮಾಡಿ. ಮಿಕ್ಸಿ ಜಾರಿಗೆ ತೆಂಗಿನ ಕಾಯಿ, ಒಣ ಕೊಬ್ಬರಿ, ನೆನೆಸಿದ ಗೋಡಂಬಿ, ಬಾದಾಮಿ, ಏಲಕ್ಕಿ, ಹುರಿದ ಅಕ್ಕಿ ಮತ್ತು ಗಸಗಸೆ ಎಲ್ಲವನ್ನೂ ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಅರ್ಧ ಲೋಟ ಹಾಲು ಹಾಕಿ ಚೆನ್ನಾಗಿ ನುಣ್ಣನೆ ರುಬ್ಬಿಕೊಳ್ಳಿ.

ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಹಾಕಿ ಅದನ್ನು ನೀರಿನಲ್ಲಿ ಕರಗಿಸಿ. ಚೆನ್ನಾಗಿ ಕರಗಿದ ಬೆಲ್ಲದ ನೀರನ್ನು ಸೋಸಿಕೊಳ್ಳಿ. ಆ ಬೆಲ್ಲದ ನೀರಿಗೆ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ ಗಟ್ಟಿ ಆಗುವವರೆಗೆ ಕುದಿಯಲು ಬಿಡಿ. ನಂತರ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿಯನ್ನು ಹುರಿದು ಮಿಶ್ರಣಕ್ಕೆ ಸೇರಿಸಿ. ಈಗ ವಿಶೇಷವಾದ ಬಿಸಿ ಬಿಸಿ ಗಸಗಸೆ ಪಾಯಸ ಸವಿಯಲು ಸಿದ್ಧ.

Gayathri SG

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

3 hours ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

3 hours ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

3 hours ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

5 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

5 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

6 hours ago