News Karnataka Kannada
Saturday, May 04 2024
ಇತರೆ

ಇಂದಿನಿಂದ 1 ವಾರ ಫ್ಲಿಪ್‌ಕಾರ್ಟ್, ಅಮೆಜಾನ್ ಬಿಗ್​​ ಬಿಲಿಯನ್​ ಡೇ

1 week from today on Flipkart, Amazon Big Billion Day
Photo Credit : News Kannada

ಇಂದಿನಿಂದ ಈ ವರ್ಷದ ಬಿಗ್​​ ಬಿಲಿಯನ್​ ಡೇ ಇಂದಿನಿಂದ ಶುರುವಾಗಿದೆ. ಅಕ್ಟೋಬರ್​​ 8ನೇ ತಾರೀಕು ಮಧ್ಯರಾತ್ರಿಯಿಂದಲೇ ಶುರುವಾದ ಈ ಮೆಗಾ ಮಾರಾಟ ಮೇಳ ಇನ್ನೊಂದು ವಾರ ಅಂದರೆ 15ನೇ ತಾರೀಕಿನವರೆಗೂ ಇರಲಿದೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಅನ್ನೋ ಭಾರತದ ಅತೀ ದೊಡ್ಡ ಎರಡು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರನ್ನು ಆಕರ್ಷಿಸಲು ಅತೀ ಹೆಚ್ಚು ಡಿಸ್ಕೌಂಟ್​​ ನೀಡುತ್ತಿದೆ.

ಮೊಬೈಲ್​ ಫೋನ್​, ಲ್ಯಾಪ್​​ ಟಾಪ್​​, ಸ್ಮಾರ್ಟ್​ ವಾಚ್​ ಸೇರಿದಂತೆ ನಾನಾ ಗ್ಯಾಜೆಟ್​ಗಳು, ಎಲೆಕ್ಟ್ರಾನಿಕ್​ ಐಟಮ್​ಗಳು ಗ್ರಾಹಕರಿಗೆ ಅತೀ ಹೆಚ್ಚು ಡಿಸ್ಕೌಂಟ್​​ನಲ್ಲಿ ಸಿಗಲಿವೆ. ಅದರಲ್ಲೂ HDFC, SBI, ICCI, AXIS, ಕೋಟಕ್​​ ಮಹೀಂದ್ರಾ ಸೇರಿದಂತೆ ಯಾವುದೇ ಬ್ಯಾಂಕ್​ ಕ್ರೆಡಿಟ್​ ಮತ್ತು ಡೆಬಿಟ್​ ಕಾರ್ಡ್​​ ಮೂಲಕ ಪರ್ಚೇಸ್​ ಮಾಡಿದ್ರೆ ಶೇ.10 ರಷ್ಟು ಡಿಸ್ಕೌಂಟ್​ ಲಭ್ಯವಿದೆ. ಇನ್ನೂ ಕ್ಯಾಶ್​ ಬ್ಯಾಕ್​ ಆಫರ್​​ ಕೂಡ ನೀಡಿದ್ದಾರೆ.

70 ಸಾವಿರ ಬೆಲೆಯ ಐಫೋನ್​​ 14 ಕೇವಲ 50 ಸಾವಿರಕ್ಕೆ, 80 ಸಾವಿರ ಬೆಲೆಯ ಐಫೋನ್​​ 14 ಪ್ಲಸ್​​​ 55-60 ಸಾವಿರಕ್ಕೆ ಸಿಗಲಿದೆ. ಬರೋಬ್ಬರಿ 18 ಪರ್ಸೆಂಟ್​ ಡಿಸ್ಕೌಂಟ್​​ ನೀಡಲಾಗಿದೆ. ಐಫೋನ್​ 12 35 ಸಾವಿರ, ಐಫೋನ್​​ 13 45 ಸಾವಿರಕ್ಕೆ ಸಿಗುತ್ತಿದೆ.

ರೆಡ್​​ ಮಿ ನೋಟ್​ 12 ಪ್ರೋ 18 ಸಾವಿರ, ಸ್ಯಾಮ್ಸಂಗ್​ ಗೆಲಾಕ್ಸಿ 21 ಫೋನ್​​ 30 ಸಾವಿರ, ಮೋಟೋ ಜಿ54 15 ಸಾವಿರ, ಗೂಗಲ್​ ಪಿಕ್ಸಲ್​ 7 37 ಸಾವಿರ, ನಥಿಂಗ್​​ ಫೋನ್​ 1 23 ಸಾವಿರಕ್ಕೆ ಲಭ್ಯವಿದೆ. ಫಾಸಿಲ್, ಟೈಟನ್, ಟಾಮಿ ಹಿಲ್ ಫಿಗರ್, ಪೊಲೀಸ್ ನಂಥ ದುಬಾರಿ ವಾಚ್ ಬ್ರಾಂಡ್ ಗಳಿಗೂ ಶೇ. 60ರಷ್ಟು ರಿಯಾಯಿತಿಯನ್ನೂ ಘೋಷಿಸಲಾಗಿದೆ.
ಇದಲ್ಲದೆ ವಾಶಿಂಗ್ ಮೆಷಿನ್ ಗಳು, ಏರ್ ಟಿಕಟ್ ಗಳು, ಸ್ಮಾರ್ಟ್ ವಾಚ್ ಗಳು, ಇಯರ್ ಬಡ್ ಗಳು, ಗೋಸರಿ ಪದಾರ್ಥಗಳು ರಿಯಾಯಿತಿ ದರದಲ್ಲಿ ದೊರಕಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು