ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 10 ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಫಿನಾಲೆಯತ್ತ ಸಾಗುತ್ತಿದೆ. ಇದೀಗ ಈ ಸ್ಪರ್ಧೆಯ ಫಿನಾಲೆ ಹಂತಕ್ಕೆ ತಲುಪಲಿರುವ ಸ್ಪರ್ಧಿಗಳ ಆಯ್ಕೆ ನಡೆಸುವ ನಿಟ್ಟಿನಲ್ಲಿ ಟಾಸ್ಕ್ ನೀಡಲಾಗಿದೆ. ಈ ಬಾರಿಯ ಟಾಸ್ಕ್ನಲ್ಲಿ ಗೆದ್ದು ವಾರದ ಕೊನೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸುವ ಸ್ಪರ್ಧಿ ಫಿನಾಲೆ ವಾರಕ್ಕೆ ನೇರವಾಗಿ ಟಿಕೆಟ್ ಪಡೆಯುತ್ತಾರೆ ಎಂದು ಬಿಗ್ಬಾಸ್ ಹೇಳಿದ್ದಾರೆ.
ಈ ಟಿಕೆಟ್ ಅನ್ನು ʼಟಿಕೆಟ್ ಟು ಫಿನಾಲೆʼ ಎಂದು ಕರೆಯಲಾಗಿದ್ದು, ತುಕಾಲಿ ಸಂತು, ತನಿಷಾ ಕುಪ್ಪುಂಡ, ಕಾರ್ತಿಕ್ ಮಹೇಶ್, ವರ್ತೂರ್ ಸಂತೋಷ್, ನಮ್ರತಾ ಗೌಡ, ವಿನಯ್ ಗೌಡ, ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಶೃಂಗೇರಿ ಪೈಕಿ ಯಾರು ನೇರವಾಗಿ ಟಿಕೆಟ್ ಪಡೆಯುತ್ತಾರೆ ಎಂದು ಕಾದು ನೋಡಬೇಕಿದೆ.