ಬೆಂಗಳೂರು: ತಾವು ಬೇರೆ ಭಾಷೆ ಇಂಡಸ್ಟ್ರಿಗೆ ಹೋದ ಬಗ್ಗೆ ಮಾತನಾಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ ಪ್ರಶಾಂತ್ ನೀಲ್. ಈ ಸಮಯದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ.
ಹೌದು, ಸಲಾರ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಶಾಂತ್ ನೀಲ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ‘ಒಬ್ಬರಿಂದಲೇ ಕನ್ನಡ ಫಿಲಂ ಇಂಡಸ್ಟ್ರಿ ಬೆಳೆದಿಲ್ಲ’ ಎನ್ನುವ ಮೂಲಕ, ಸ್ಯಾಂಡಲ್ವುಡ್ಗೆ ಕೊಡುಗೆ ನೀಡಿರುವ ಎಲ್ಲಾ ನಟ & ನಿರ್ದೇಶಕರನ್ನು ನೆನಪು ಮಾಡಿಕೊಂಡಿದ್ದಾರೆ.
ಈಗ ದೊಡ್ಡ ಸ್ಟಾರ್ ಡೈರೆಕ್ಟರ್ ಆಗಿ ಬೆಳೆದು ನಿಂತಿರುವ ಪ್ರಶಾಂತ್ ನೀಲ್, ತಾವು ಬೆಳೆದು ಬಂದ ದಾರಿಯನ್ನು ನೆನಪು ಮಾಡಿಕೊಂಡಿದ್ದಾರೆ. ಹಾಗೇ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಈಗ ನಾನು ಇಷ್ಟೆಲ್ಲಾ ಸಾಧನೆ ಮಾಡಿದ್ದೀನಿ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
What am today is because of Kannada Film Industry 🔥 – #PrashanthNeel#Salaar #Prabhas pic.twitter.com/1Di8dVxnKu
— 𝗦𝗵𝗿𝗲𝘆𝗶 ᵀᵒˣᶦᶜ (@NameIsShreyash) December 21, 2023