ಹೊಸದಿಲ್ಲಿ: ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಅನ್ನು ನಿರ್ಮಿಸಿದ ಸಾಕ್ಷ್ಯಚಿತ್ರ ನಿರ್ಮಾಪಕ ಕಾರ್ತಿಕಿ ಗೊನ್ಸಾಲ್ವೆಸ್ ಮತ್ತು ನಿರ್ಮಾಪಕ ಗುನೀತ್ ಮೊಂಗಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿ ಮಾಡಿದರು.
“ದಿ ಎಲಿಫೆಂಟ್ ವಿಸ್ಪರರ್ಸ್’ ನ ಚಿತ್ರ ಜಾಗತಿಕವಾಗಿ ಮೆಚ್ಚುಗೆ ಪಡೆದಿದೆ. ಈ ನಿಟ್ಟಿನಲ್ಲಿ ಚಿತ್ರ ತಯಾರಿಸಿದ ಅದ್ಬುತ ತಂಡವನ್ನು ಭೇಟಿ ಮಾಡುವ ಅವಕಾಶ ನನಗೆ ದೊರೆಯಿತು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಸಾಕ್ಷ್ಯಚಿತ್ರವನ್ನು ಗೊನ್ಸಾಲ್ವಿಸ್ ನಿರ್ದೇಶಿಸಿದರೆ, ಮೊಂಗಾ ಅದನ್ನು ನಿರ್ಮಿಸಿದ್ದಾರೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅನಾಥ ಮರಿ ಆನೆ ರಘು ಮತ್ತು ದಂಪತಿ ನಡುವಿನ ಕುರಿತು ಬಾಂಧವ್ಯದ ಕುರಿತ ಕಥೆಯನ್ನು ಚಿತ್ರ ಹೊಂದಿದೆ.
The cinematic brilliance and success of ‘The Elephant Whisperers’ has drawn global attention as well as acclaim. Today, I had the opportunity to meet the brilliant team associated with it. They have made India very proud. @guneetm @EarthSpectrum pic.twitter.com/44u16fbk3j
— Narendra Modi (@narendramodi) March 30, 2023