ಇತ್ತೀಚಿಗಷ್ಟೇ ‘ದಿ ಕೇರಳ ಸ್ಟೋರಿ’ ಸಿನಿಮಾ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು. ಸಿನಿಮಾ ರಿಲೀಸ್ಗೂ ಮುನ್ನವೇ ಭಾರೀ ವಿವಾದದ ಮೂಲಕ ಸದ್ದು ಮಾಡಿತ್ತು. ಅದಾ ಶರ್ಮಾ ನಟಿಸಿರುವ ಈ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದು, ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ. ಈಗ ಈ ನಿರ್ದೇಶಕ ಮತ್ತು ನಿರ್ಮಾಪಕರ ಜೋಡಿ ಮತ್ತೊಂದು ಹೊಸ ಚಿತ್ರದೊಂದಿಗೆ ತೆರೆ ಮೇಲೆ ಬರುತ್ತಿದೆ.
ನೈಜ ಕಥೆಯನ್ನು ಆಧರಿಸಿದ ಮತ್ತೊಂದು ಸಿನಿಮಾ ‘ಬಸ್ತರ್’ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
‘ಬಸ್ತರ್’ ಸಿನಿಮಾವು ನೈಜ ಘಟನೆಯಾಧರಿತವಾಗಿದ್ದು 2024 ಏಪ್ರಿಲ್ 5ರಂದು ತೆರೆಕಾಣಲಿದೆ. ಶಾ ಅವರ ಸನ್ಶೈನ್ ಪಿಕ್ಚರ್ಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುವುದು ಎಂದು ಸುದೀಪ್ತೋ ಸೇನ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಚಿತ್ರದ ತಾರಾಗಣದ ಬಗ್ಗೆ ಸಿನಿಮಾ ತಂಡ ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಮತ್ತೊಮ್ಮೆ ಅದಾ ಶರ್ಮಾ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗ್ತಿದೆ. ಚಿತ್ರದ ಪೋಸ್ಟರ್ನಲ್ಲಿ ‘ಬಸ್ತರ್’ ಅಕ್ಷರ ಕೆಂಪು ಬಣ್ಣದ ಫಾಂಟ್ಗಳಲ್ಲಿ ಕಾಣಿಸಿಕೊಂಡಿದೆ. ಟೈಟಲ್ ಕೆಳಗೆ ‘ದೇಶವನ್ನೇ ಬಿರುಗಾಳಿ ಎಬ್ಬಿಸಲಿರುವ ಗುಪ್ತ ಸತ್ಯ’ ಎಂದು ಬರೆಯಲಾಗಿದೆ. ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
April 6, 2010.
76 CRPF jawan and 8 poor villagers were killed in an bloodiest attack by the terrorists, in Chintalner village of Dantewada District of Bastar, Chhattisgarh. After exactly 14-years, the poetic justice will be delivered.#Bastar … Our humble presentation after… pic.twitter.com/qXZlOJsprp— Sudipto SEN (@sudiptoSENtlm) June 26, 2023