ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ, ‘ಸಲಾರ್’ನ ಟ್ರೈಲರ್ ಬಿಡುಗಡೆ ಆಗಿದೆ. ಪ್ರಶಾಂತ್ ನೀಲ್ ಸೃಷ್ಟಿಸಿರುವ ಅದ್ಭುತ ಪ್ರಪಂಚ ಹಾಗೂ ಅಲ್ಲಿ ನಡೆಯುತ್ತಿರುವ ಯುದ್ಧದ ಸಣ್ಣ ಝಲಕ್ ಟ್ರೈಲರ್ ತೋರಿಸಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನ ಮೂಡಿಬರುತ್ತಿರುವ ‘ಸಲಾರ್’ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ತಂಡ ಪ್ರಚಾರ ಕಾರ್ಯ ಆರಂಭ ಮಾಡಿದೆ.
ಈಗಾಗಲೇ ಪ್ರಶಾಂತ್ ನೀಲ್ ಹೇಳಿರುವಂತೆ ಪಕ್ಕಾ ಆಕ್ಷನ್ ಭರಿತ ವೈಯೊಲೆಂಟ್ ಕತೆಯುಳ್ಳ ಸಿನಿಮಾ ಇದು. ಅಂತೆಯೇ ಸಿನಿಮಾದ ಟ್ರೈಲರ್ನಲ್ಲಿ ಸಹ ಆ ವೈಯಲೆನ್ಸ್ನ ಕೆಲವು ಝಲಕ್ಗಳನ್ನು ನೀಲ್ ತೋರಿಸಿದ್ದಾರೆ.