ಟಾಲಿವುಡ್: ಟಾಲಿವುಡ್ ದಂಪತಿಗಳಾದ ಸುಭಾಶ್ರೀ ಗಂಗೂಲಿ ಮತ್ತು ರಾಜ್ ಚಕ್ರಬರ್ತಿ ಅವರಿಗೆ ಎರಡನೇ ಬಾರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಈ ಬಗ್ಗೆ ನಟಿ ಇನ್ಸ್ಟಾಗ್ರಾಮ್ಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಮಾಸ್ಕ್ ಧರಿಸಿ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದದಿಂದ ಈ ಬಿಕ್ಕಟ್ಟನ್ನು ಜಯಿಸುತ್ತೇವೆ ಎಂದು ನಟಿ ತಮ್ಮ ಇನ್ಸ್ಟಾಗ್ರಾಮ್ಲ್ಲಿ ಬರೆದುಕೊಂಡಿದ್ದಾರೆ.
ಈಗ ನಾವು ಪ್ರತ್ಯೇಕವಾಗಿದ್ದೇವೆ. ಕಳೆದ 72 ಗಂಟೆಗಳಲ್ಲಿ ನಮ್ಮೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಬೇರೆಯವರಿಂದ ಪ್ರತ್ಯೇಕವಾಗಿರಿ.