News Karnataka Kannada
Monday, April 29 2024
ತೆಲುಗು

‘ಭೀಮ್ಲಾ ನಾಯಕ್​’ ಚಿತ್ರ ರಿಲೀಸ್: ಪವನ್​ ಕಲ್ಯಾಣ್​ಗೆ ಜೈಕಾರ ಕೂಗಿದ ಫ್ಯಾನ್ಸ್​

Pavan Kalyan
Photo Credit :

ಬೆಂಗಳೂರಿನ ಚಿತ್ರಮಂದಿರಗಳ ಎದುರು ಪವನ್​ ಕಲ್ಯಾಣ್ ಫ್ಯಾನ್ಸ್​ ಕುಣಿದು ಕುಪ್ಪಳಿಸಿದ್ದಾರೆ. ಸಿನಿಮಾ ಇಷ್ಟ ಆಗಿದ್ದಕ್ಕೆ ನೆಚ್ಚಿನ ಹೀರೋಗೆ ಜೈಕಾರ ಕೂಗಿದ್ದಾರೆ.

ಟಾಲಿವುಡ್​ನ ಬಹುನಿರೀಕ್ಷಿತ ‘ಭೀಮ್ಲಾ ನಾಯಕ್​’ ಚಿತ್ರ ಇಂದು (ಫೆ.25) ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಪವನ್​ ಕಲ್ಯಾಣ್ ಮತ್ತು ರಾನಾ ದಗ್ಗುಬಾಟಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಮಲಯಾಳಂನ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ರಿಮೇಕ್​ ಆಗಿ ‘ಭೀಮ್ಲಾ ನಾಯಕ್​’ ಮೂಡಿಬಂದಿದೆ. ಕರ್ನಾಟಕದಲ್ಲಿಯೂ ಪವನ್​ ಕಲ್ಯಾಣ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಮೊದಲ ದಿನ ಮೊದಲ ಶೋ ನೋಡಿ ಪವನ್​ ಕಲ್ಯಾಣ್​ ಫ್ಯಾನ್ಸ್​ ಖುಷಿಪಟ್ಟಿದ್ದಾರೆ.

ಬೆಂಗಳೂರಿನ ಚಿತ್ರಮಂದಿರಗಳ ಎದುರು ಕುಣಿದು ಕುಪ್ಪಳಿಸಿದ್ದಾರೆ. ಸಿನಿಮಾ ಇಷ್ಟ ಆಗಿದ್ದಕ್ಕೆ ಪವನ್​ ಕಲ್ಯಾಣ್​ಗೆ ಜೈಕಾರ ಕೂಗಿದ್ದಾರೆ. ಈ ಚಿತ್ರಕ್ಕೆ ಸಾಗರ್​ ಕೆ. ಚಂದ್ರ ನಿರ್ದೇಶನ ಮಾಡಿದ್ದಾರೆ. ಸಂಯುಕ್ತಾ ಮೆನನ್​ ಕೂಡ ಅಭಿನಯಿಸಿದ್ದಾರೆ. ಎಸ್​. ಥಮನ್​ ಅವರ ಸಂಗೀತಕ್ಕೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ಕಡೆಗಳಲ್ಲಿ ‘ಭೀಮ್ಲಾ ನಾಯಕ್​’ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ಈ ಚಿತ್ರ ರಿಲೀಸ್​ ಆಗಿರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ತಡವಾಗಿತ್ತು. ಈಗ ಚಿತ್ರ ಬಿಡುಗಡೆ ಆಗಿದ್ದು, ಪವನ್​ ಕಲ್ಯಾಣ್​ ಫ್ಯಾನ್ಸ್​ ಫಿದಾ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು