ನಟ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ʼಭೀಮ್ಲಾ ನಾಯಕ್ʼ ಚಿತ್ರ ಫೆ.25ಕ್ಕೆ ತೆರೆಗೆ ಬರಲಿದೆ. ಈ ಬಗ್ಗೆ ಚಿತ್ರತಂಡ ತಿಳಿಸಿದೆ.
ಈ ಹಿಂದೆ ಚಿತ್ರವನ್ನು ಏಪ್ರಿಲ್ ಬಳಿಕ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿತ್ತು. ಇದೀಗ ದಿಢೀರನೆ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ.
ಬಹುಭಾಷಾ ಚಿತ್ರಗಳು ಏಪ್ರಿಲ್ ನಲ್ಲಿ ರಿಲೀಸ್ ಆಗುತ್ತಿದ್ದು, ಭೀಮ್ಲಾ ನಾಯಕ್ ಚಿತ್ರವನ್ನು ಇದೇ 25ಕ್ಕೆ ರಿಲೀಸ್ ಮಾಡಲು ನಿಗದಿ ಪಡಿಸಲಾಗಿದೆ. ಈ ಚಿತ್ರಕ್ಕೆ ಸಾಗರ್.ಕೆ. ಚಂದ್ರಾ ನಿರ್ದೇಶನ ಮಾಡುತ್ತಿದ್ದು, ಸಿತಾರಾ ಎಂಟರ್ಟೈನ್ ಮೆಂಟ್ ಸಂಸ್ಥೆ ಈ ಚಿತ್ರಕ್ಕೆ ಹೂಡಿಕೆ ಮಾಡಿದೆ.
ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಪವನ್ ಕಲ್ಯಾಣ್ ನಟಿಸಿದ್ದು, ನಿತ್ಯಾ ಮೆನನ್, ಸಂಯುಕ್ತಾ ಮೆನನ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.