News Karnataka Kannada
Sunday, May 05 2024
ತಮಿಳು

ಕಾಲಿವುಡ್​ ಸಿನಿಮಾಗೆ ಸಹಿ ಮಾಡಿದ ರಾಗಿಣಿ ದ್ವಿವೇದಿ

Ragini
Photo Credit :

ಚಿತ್ರರಂಗದಲ್ಲಿ ನಟಿ ರಾಗಿಣಿ ದ್ವಿವೇದಿ  ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಅವರು ಸೈ ಎನಿಸಿಕೊಂಡಿದ್ದಾರೆ.

ಕನ್ನಡದ ‘ಕೆಂಪೇಗೌಡ’, ‘ವೀರ ಮದಕರಿ’ ಸಿನಿಮಾಗಳು ರಾಗಿಣಿಗೆ ಸಖತ್​ ಖ್ಯಾತಿ ತಂದುಕೊಟ್ಟವು. ಪರಭಾಷೆಯ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಬೇರೆ ಬೇರೆ ರೀತಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬಹುದಿನಗಳ ಬಳಿಕ ಅವರು ಒಂದು ಕಾಲಿವುಡ್​ ಸಿನಿಮಾಗೆ ಸಹಿ ಮಾಡಿದ್ದಾರೆ. ‘ಒನ್​ 2 ಒನ್​’  ಎಂಬುದು ಈ ಚಿತ್ರದ ಟೈಟಲ್​. ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಹೂರ್ತ ನೆರವೇರಿಸಲಾಯಿತು. ಈಗ ಶೂಟಿಂಗ್​ ಕೂಡ ಆರಂಭ ಆಗಿದೆ. ಫ್ಯಾಮಿಲಿ ಡ್ರಾಮಾ ಜೊತೆ ಸಸ್ಪೆನ್ಸ್ ಕಥೆ ಈ ಸಿನಿಮಾದಲ್ಲಿ ಇರಲಿದೆ. ಹೋಮ್ಲಿ ಲುಕ್​ನಲ್ಲಿ ರಾಗಿಣಿ ದ್ವಿವೇದಿ ಕಾಣಿಸಿಕೊಳ್ಳಲಿದ್ದಾರೆ. ತಿರುಜ್ಞಾನಮ್​ ನಿರ್ದೇಶನ ಮಾಡುತ್ತಿರುವ ‘ಒನ್​ 2 ಒನ್​’ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ರಾಗಿಣಿ ಫ್ಯಾನ್ಸ್​ ಕಾದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು