ಚೆನ್ನೈ: ಗೋಕುಲಂ ಸ್ಟುಡಿಯೊದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟ ವಿಜಯ್ ಮತ್ತು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಭೇಟಿಯಾಗಿದ್ದು, ಇಬ್ಬರ ಅಭಿಮಾನಿಗಳು ಸಂತಸಗೊಂಡಿದ್ದಾರೆ.
ಇಬ್ಬರೂ ಶೂಟಿಂಗ್ ನಿಮಿತ್ತ ಸ್ಟುಡಿಯೋಗೆ ಬಂದಿದ್ದರು. ಈ ಸಂದರ್ಭದಲ್ಲಿ ಅನಿರೀಕ್ಷಿತ ಭೇಟಿ ನಡೆದಿದೆ. ಧೋನಿ, ಜಾಹೀರಾತಿನ ಶೂಟಿಂಗ್ಗಾಗಿ ಆಗಮಿಸಿದ್ದರೆ ವಿಜಯ್ ತಮ್ಮ ನೂತನ ‘ಬೀಸ್ಟ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರಿಬ್ಬರ ನಡುವಣ ಭೇಟಿಯ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
2008ರಲ್ಲಿ ವಿಜಯ್ ಅವರು ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ರಾಯಭಾರಿಯಾದ ಬಳಿಕ ಧೋನಿ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಹಲವಾರು ಭಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.