News Karnataka Kannada
Thursday, May 02 2024
ಮನರಂಜನೆ

ಸಲ್ಮಾನ್ ಖಾನ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ ಕಿಚ್ಚ ಸುದೀಪ್

Sallu
Photo Credit : Twitter

ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಹುಟ್ಟು ಹಬ್ಬಕ್ಕೆ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಅವರು ಬರೆದುಕೊಂಡಿದ್ದು, ನಿಮ್ಮೊಂದಿಗೆ ಕಳೆದ ಕ್ಷಣಗಳು ಯಾವತ್ತಿಗೂ ಹಸಿರಾಗಿರುತ್ತವೆ. ನಿಮ್ಮಂತಹ ಅದ್ಭುತ ಮನುಷ್ಯ ನನಗೆ ಸಿಕ್ಕಿದ್ದಕ್ಕೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.

ಕಿಚ್ಚ ಸುದೀಪ್ ಸಲ್ಮಾನ್ ಖಾನ್‌ರನ್ನ ‘ಸರ್’ ಅಂತಲೇ ಕರೆಯುತ್ತಾರೆ. ಆದರೆ ಮನದಲ್ಲಿ ಸಹೋದರನ ಸ್ಥಾನಕೊಟ್ಟಿದ್ದಾರೆ. ಹಾಗಾಗಿಯೇ ಸಲ್ಮಾನ್ ಸರ್ ಹಾಗೂ ಸಹೋದರ ಸಮಾನ ಸಲ್ಮಾನ್ ಖಾನ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ಅಂತಲೇ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಕಿಚ್ಚ ಸುದೀಪ್ ಇದೀಗ ಸಲ್ಮಾನ್‌ ಖಾನ್‌ಗೆ ಬರ್ತ್‌ ಡೇ ಶುಭಾಷಯ ತಿಳಿಸಿದ್ದಾರೆ. ಸಲ್ಮಾನ್ ಜೊತೆಗಿನ ಒಂದು ಸ್ಪೆಷಲ್ ಫೋಟೋವೊಂದನ್ನ ಕೂಡ ಹಂಚಿಕೊಂಡಿದ್ದಾರೆ. ಸ್ಪೆಷಲ್ ಅನಿಸೋ ಮನಸ್ಸಿನ ಮಾತುಗಳನ್ನು ಬರೆದುಕೊಂಡಿದ್ದಾರೆ.

ನನ್ನ ಪ್ರೀತಿಯ ಸಹೋದರ ಮತ್ತು ಸರ್ ನಿಮಗೆ ಹುಟ್ಟುಹಬ್ಬದ ಶುಭಾಷಯಗಳು. ನಿಮ್ಮ ಜೊತೆಗೆ ಕಳೆದ ಪ್ರತಿ ಕ್ಷಣವೂ ತುಂಬಾ ಅಮೂಲ್ಯವಾಗಿರುತ್ತವೆ. ನನ್ನ ಜೀವನದಲ್ಲಿ ನೀವು ಸದಾ ವಿಶೇಷ ವ್ಯಕ್ತಿನೇ ಆಗಿದ್ದಿರಾ. ಹೀಗೆ ನಮ್ಮ ಜೊತೆಗೆ ಇರೋದಕ್ಕೆ ಧನ್ಯವಾದಗಳು ಅಂತಲೇ ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಚಿತ್ರದಲ್ಲಿ ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಬಲ್ಲಿ ಸಿಂಗ್ ಪಾತ್ರವನ್ನ ನಿರ್ವಹಿಸಿದ್ದರು. ಈ ಮೂಲಕ ತೆರೆ ಮೇಲೆ ಮುಖಾ-ಮುಖಿ ಆಗಿದ್ದ ಸಲ್ಮಾನ್ ಖಾನ್ ಹಾಗೂ ಸುದೀಪ್ ತೆರೆ ಹಿಂದೆ ಒಳ್ಳೆ ಸ್ನೇಹಿತರೂ ಆಗಿದ್ದಾರೆ. ಸಹೋದರ ಬಾಂಧವ್ಯ ಕೂಡ ಬೆಳೆದಿದೆ.

ಇನ್ನು ಕೆಲ ತಿಂಗಳ ಹಿಂದೆಯಷ್ಟೇ ಕಿಚ್ಚ ಸುದೀಪ್ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ನಿರ್ದೇಶನದ ಬಗ್ಗೆ ಬ್ರೇಕಿಂಗ್ ಅಪ್‌ಡೇಟ್‌ವೊಂದನ್ನ ನೀಡಿದ್ದರು. ಬ್ಯಾಡ್ ಬ್ಯಾಯ್ ಸಲ್ಮಾನ್ ಖಾನ್‌ ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡುವುದಾಗಿ ಹೇಳಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು