ಬೆಂಗಳೂರು: ತಮ್ಮ ನಟನೆಯ ಮೂಲಕ ಬಹುಭಾಷಾ ನಟಿ ಎಂದೇ ಬಿಂಬಿಸಿಕೊಂಡಿರುವ ಇಷಾಕೊಪ್ಪೀಕರ್ ಅವರ 14ನೇ ವರ್ಷದ ದಾಂಪತ್ಯ ಜೀವನ ಕೊನೆಗೂ ಮುರಿದು ಬಿದ್ದಿದೆ. ಉದ್ಯಮಿ ಟಮ್ಮಿ ನಾರಂಗ್ ಅವರನ್ನು ಪ್ರೀತಿಸಿ 2009ರಲ್ಲಿ ವಿವಾಹ ಬಂಧನಕ್ಕೆ ಸಿಲುಕಿದ್ದ ಇಷಾ ಕೊಪ್ಪೀಕರ್ಗೆ 9 ವರ್ಷದ ಪುತ್ರಿಯಿದ್ದು, ಇತ್ತೀಚೆಗೆ ದಾಂಪತ್ಯದಲ್ಲಿ ಬಿರುಕು ಮೂಡಿರುವುದರಿಂದ ಇಷಾ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ನಟಿ ಇಷಾಕೊಪ್ಪೀಕರ್ ಹಾಗೂ ಉದ್ಯಮಿ ಟಮ್ಮಿನಾರಂಗ್ ನಡುವೆ ಹಲವು ಬಾರಿ ಹೊಂದಾಣಿಕೆಯ ವಿಷಯವನ್ನು ಪ್ರಸ್ತಾಪಿಸಿದರೂ ಕೂಡ ಒಮ್ಮತ ಮೂಡದ ಕಾರಣ ಕೊನೆಗೂ ವಿಚ್ಛೇದನ ಪಡೆದಿದ್ದು, ಇಷಾ ತಮ್ಮ ಪುತ್ರಿಯೊಂದಿಗೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯೂ ದಟ್ಟವಾಗಿ ಹರಿದಾಡುತ್ತಿದೆ.
1997ರಲ್ಲಿ ಚಿತ್ರರಂಗಕ್ಕೆ ಪ್ರವೇಶ ನೀಡಿದ ಇಷಾಕೊಪ್ಪೀಕರ್ ಅವರು ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು. ಸೂರ್ಯವಂಶ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು ಹೂ ಅಂತಿಯಾ ಹೂಂ ಅಂತಿಯಾ’,ಓ ನನ್ನ ನಲ್ಲೆ ‘, `ಕವಚ ‘ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.