News Karnataka Kannada
Saturday, May 11 2024
ಮನರಂಜನೆ

‘ಸಿಂಗಂ’ ಖ್ಯಾತಿಯ ನಟ ಜಯಂತ್ ಸಾವರ್ಕರ್ ನಿಧನ

Jayant Savarkar
Photo Credit :

ಮುಂಬೈ: ಹಿರಿಯ ನಟ ಜಯಂತ್ ಸಾವರ್ಕರ್ ಅವರು ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಈ ವಿಚಾರವನ್ನು ಅವರ ಮಗ ಕೌಸ್ತುಭ್ ಸಾವರ್ಕರ್ ಅವರು ಖಚಿತಪಡಿಸಿದ್ದಾರೆ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಜಯಂತ್ ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದರು. ‘ಸಿಂಗಂ’ ಸಿನಿಮಾದಿಂದ ಅವರ ಜನಪ್ರಿಯತೆ ಹೆಚ್ಚಿತ್ತು. ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

‘ತಂದೆಯವರಿಗೆ 15 ದಿನಗಳ ಹಿಂದೆ ಕಡಿಮೆ ರಕ್ತದೊತ್ತಡ ಉಂಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು. ಆದರೆ, ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿತ್ತು. ಅವರನ್ನು ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗಿಲ್ಲ’ ಎಂದು ಕೌಸ್ತುಭ್ ಅವರು ತಿಳಿಸಿದ್ದಾರೆ.

ಜಯಂತ್ ಸಾವರ್ಕರ್ ಅವರು ಮರಾಠಿ, ಹಿಂದಿ, ರಂಗಭೂಮಿ ಹಾಗೂ ದೂರದರ್ಶನದಲ್ಲಿ ನಟಿಸಿದ್ದಾರೆ. ಅವರು ಆರು ದಶಕಗಳು ನಟನೆಯಲ್ಲಿ ತೊಡಗಿಕೊಂಡಿದ್ದರು. ಹಿಂದಿಯಲ್ಲಿ 2011ರಲ್ಲಿ ರಿಲೀಸ್ ಆದ ‘ಸಿಂಗಂ’ ಸಿನಿಮಾದಲ್ಲಿ ಕಮಲಾಕಾಂತ್ ಭೋಸ್ಲೆ ಪಾತ್ರ ಮಾಡಿದ್ದರು. ನಾಯಕಿ ಕಾಜಲ್ ​ಅಗರ್​ವಾಲ್ ಅವರ ಅಜ್ಜನ ಪಾತ್ರ ಇದಾಗಿತ್ತು. ‘ರಾಕಿ ಹ್ಯಾಂಡ್ಸಮ್​’, ‘ವಾಸ್ತವ್​: ದಿ ರಿಯಾಲಿಟಿ’ ಮೊದಲಾದ ಚಿತ್ರಗಳಲ್ಲಿ ಜಯಂತ್ ಬಣ್ಣ ಹಚ್ಚಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು