ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಇಂದು (ಫೆಬ್ರವರಿ 7) ಮೊದಲ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಜೋಡಿ ರಾಜಸ್ಥಾನದ ಜೈಸಲ್ಮೇರ್ನಲ್ಲಿರುವ ಸೂರ್ಯಗಢ ಪ್ಯಾಲೇಸ್ನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು.
ಸದ್ಯ ದಂಪತಿಗೆ ಅಭಿಮಾನಿಗಳು ಹಾಗೂ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಇವರು ನೂರುಕಾಲ ಸುಖವಾಗಿ ಬಾಳಲಿ ಎಂದು ಫ್ಯಾನ್ಸ್ ಹಾರೈಸಿದ್ದಾರೆ.
ಸಿದ್ದಾರ್ಥ್ ಮಲ್ಹೋತ್ರ ಹಾಗೂ ಕಿಯಾರಾ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪ್ರೀತಿಸಿ ಮದುವೆ ಆದರು. ಈ ಜೋಡಿ ಮೊದಲ ಬಾರಿಗೆ ‘ಶೇರ್ಷಾ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿತು. ಈ ಸಿನಿಮಾ ರಿಲೀಸ್ ಆಗಿದ್ದು ಒಟಿಟಿಯಲ್ಲಿ. ಈ ಚಿತ್ರದ ಸೆಟ್ನಲ್ಲಿ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು. ಸಿದ್ದಾರ್ಥ್ ಪ್ರಪೋಸ್ ಮಾಡಿದಾಗ ಕಿಯಾರಾಗೆ ಏನು ಹೇಳಬೇಕು ಎಂಬುದೇ ಗೊತ್ತಾಗಿರಲಿಲ್ಲ. ಆ ಬಳಿಕ ಅವರು ಪ್ರೀತಿಯನ್ನು ಒಪ್ಪಿಕೊಂಡರು. ‘ಕುಟುಂಬದವರನ್ನು ನೀನೇ ಒಪ್ಪಿಸಬೇಕು’ ಎಂದು ಸಿದ್ದಾರ್ಥ್ಗೆ ಕಿಯಾರಾ ಹೇಳಿದ್ದರು. ಅಂತೆಯೇ ನಡೆದುಕೊಂಡರು ಸಿದ್ದಾರ್ಥ್. ಕುಟುಂಬದವರನ್ನು ಒಪ್ಪಿಸಿ ಸಿದ್ದಾರ್ಥ್ ಹಾಗೂ ಕಿಯಾರಾ ಮದುವೆ ಆದರು.