ಮುಂಬೈ: ಕೊಡಗಿನ ಕುವರಿ ರಶ್ಮಿಕಾಗೆ ಫ್ಯಾನ್ಸ್ ಕಂಡರೆ ಎಲ್ಲಿಲ್ಲದ ಪ್ರೀತಿ. ಅಭಿಮಾನಿಗಳನ್ನು ಅವರು ಸಾಕಷ್ಟು ಗೌರವಿಸುತ್ತಾರೆ. . ಈಗ ರಶ್ಮಿಕಾ ಮಂದಣ್ಣ ಮಿರರ್ ಸೆಲ್ಫಿ ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳ ಎದುರು ಕೋರಿಕೆ ಇಟ್ಟಿದ್ದಾರೆ.
ಇಂದು (ಫೆಬ್ರವರಿ 14) ವ್ಯಾಲೆಂಟೈನ್ಸ್ ಡೇ. ಎಲ್ಲಾ ಪ್ರೇಮಿಗಳು ಸಂಭ್ರಮದಿಂದ ಇದನ್ನು ಆಚರಿಸುತ್ತಿದ್ದಾರೆ. ಈ ಬಗ್ಗೆ ರಶ್ಮಿಕಾ ಮಂದಣ್ಣ ಪ್ರಶ್ನೆ ಮಾಡಿದ್ದಾರೆ. ಪ್ರೇಮಿಗಳ ದಿನದಂದು ಯಾರು ಯಾವ ರೀತಿಯ ಯೋಜನೆ ಹಾಕಿಕೊಂಡಿದ್ದೀರಿ ಎಂಬುದನ್ನು ಹೇಳುವಂತೆ ರಶ್ಮಿಕಾ ಕೋರಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದೆ.
ಫೆಬ್ರವರಿ 13ರ ರಾತ್ರಿ ಅವರು ಫೋಟೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳ ಬಳಿ ಪ್ರೇಮಿಗಳ ದಿನದ ಯೋಜನೆ ತಿಳಿಸಲು ಕೋರಿದ್ದಾರೆ. ಬೇಡದೇ ಇರುವ ಕಮೆಂಟ್ಗಳನ್ನು ಹಾಕಬೇಡಿ ಎಂದಿರುವ ಅವರು, ಈ ಕಮೆಂಟ್ ಬಾಕ್ಸ್ ಕೇವಲ ನನ್ನ ಫ್ಯಾನ್ಸ್ಗೆ ಎಂದು ಒತ್ತಿ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ಸದ್ಯ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.